ತೈಲ ಬೆಲೆ ಏರಿಕೆ: ಮನೆಯಲ್ಲಿ ತಟ್ಟೆ ಬಡಿದು ಪ್ರತಿಭಟನೆ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರಿಗೆ 100 ರೂ. ಡೀಸೆಲ್ ಗೆ 90 ರೂ. ದಾಟಿದ ಹಿನ್ನೆಲೆಯಲ್ಲಿ ಜೈಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ನಗರದ ಗಾಂಧಿನಗರದಲ್ಲಿ ತಮ್ಮ ಮನೆಯಲ್ಲಿ ತಟ್ಟೆ ಬಡಿದು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತಿ ಹೆಚ್ಚಿನ ಸುಂಕ ಏರಿಕೆಯಿಂದ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದೆ ಇದರ ಪರಿಣಾಮ ನಿತ್ಯ ಬಳಸುವ ವಸ್ತುಗಳ ಬೆಲೆ ತೀವ್ರ ಏರಿಕೆ ಕಂಡಿದ್ದು ಸಾಮಾನ್ಯ ಜನರ ಸಂಕಷ್ಟ ತೀವ್ರವಾಗಿದೆ ಎಂದವರು ಹೇಳಿದರು. ಕೊರೊನಾದಿಂದ ರೈತರು, ಕಾರ್ಮಿಕರು, ಕೂಲಿಕಾರರು ಹೀಗೆ ಎಲ್ಲಾ ವರ್ಗದ ಜನ ಸಂಕಷ್ಟದಲ್ಲಿದ್ದಾಗ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ ಎಂದವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಸುಂಕ ಕಡಿಮೆ ಮಾಡಬೇಕೆಂದು ಚೇತನ್ ಕಾಂತರಾಜು ಒತ್ತಾಯಿಸಿದ್ದಾರೆ.