ತೈಲ ಬೆಲೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಮೈಸೂರು: ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ದರ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ನಗರದ ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಪ್ರತಿಭಟಿಸಲಾಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ಜನರನ್ನು ಬದುಕಲು ಬಿಡಿ
ರಾಜ್ಯದಲ್ಲಿ ಈಗಾಗಲೇ ಕೂರೂನಾ ಲಾಕ್ ಡೌನ್ ನಿಂದಾಗಿ ಜನರು ಸರಿಯಾದ ಕೆಲಸ ಮತ್ತು ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ತೈಲ, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದು ಸಾಲದೆ ಮತ್ತೆ ಈಗ ವಿದ್ಯುತ್ ದರ ಯೂನಿಟ್ ಗೆ 30 ಪೈಸೆ ಹೆಚ್ಚಿಸಿರುವುದು ಸರಿಯಲ್ಲ ಎಂದರು.
ವರ್ಷಗಳು ಕಳೆದರೂ ಒಮ್ಮೆಯೂ ಯಾವ ವಸ್ತುವಿನ ಬೆಲೆ ಇಳಿಕೆ ಮಾಡದ ಸರ್ಕಾರ ಪದೇ ಪದೇ ಬೆಲೆ ಏರಿಸುತ್ತಿರುವುದು ನೋಡಿದರೆ ಇದು ಜನಪರವಲ್ಲದ ಸರ್ಕಾರ ಎನ್ನಬಹುದು ಎಂದು ಟೀಕಿಸಿದರು.
ಸರ್ಕಾರ ನಿದ್ದೆಯಿಂದ ಎಚ್ಚೆತ್ತು ಈಗಲಾದರೂ ಜನರ ಸಂಕಷ್ಟ ಅರಿತು ಬೆಲೆ ಇಳಿಕೆಯತ್ತ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ದೇಶದಲ್ಲಿ ಕೂರೊನಾಗಿಂತ ಹೆಚ್ಚು ಹಸಿವು ಬಡತನದ ಸಾವುಗಳು ಕಾಣಬಹುದು ಎಂದು ಹೇಳಿದರು
ಯೂತ್ ಕಾಂಗ್ರೆಸ್ ಅಧ್ಯಕ್ಷ ಎಂ. ಹ್ಯಾರಿಸ್, ನೌಫಿಲ್, ಇನಾಯತ್, ಭರತ್ ಮನೋಜ್, ಶಶಾಂಕ್, ಚಂದ್ರು, ವಿಷ್ಣು, ರಿಜ್ವಾನ್, ಪೈಲ್ವಾನ್ ಸುನೀಲ್, ಹರ್ಷಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.