ಕೊರೊನಾ ಸೋಂಕಿನಿಂದ ಮನುಷ್ಯ ಪಾರಾಗಲು ಬದುಕಿಗೆ ಆದ್ಯತೆ ಕೊಡಬೇಕು -ರಘು ಕೌಟಿಲ್ಯ

ಮೈಸೂರು: ಕೊರೊನಾ ಸೋಂಕಿನಿಂದ ಮನುಷ್ಯ ಪಾರಾಗಲು ಬದುಕಿಗೆ ಆದ್ಯತೆ ಕೊಡಬೇಕು ಎಂದು ಡಿ. ದೇವರಾಜ ಅರಸು ಅಭಿವೃದ್ಧಿ ಹಿಂದುಳಿದ ಅಭಿವೃದ್ಧಿ ನಿಗಮಗಳ ಪ್ರಾಧಿಕಾರ ಅಧ್ಯಕ್ಷ ಆರ್ ರಘು ಕೌಟಿಲ್ಯರವರು ಹೇಳಿದರು.
ನಗರದ ಪುರಭವನ ಬಳಿ ಇರುವ ಡಾ. ರಾಜ್ ಕುಮಾರ್ ಉದ್ಯಾನದ ಪ್ರತಿಮೆಯ ಬಳಿ ಡಿ. ದೇವರಾಜ ಅರಸು ಅಭಿವೃದ್ಧಿ ಹಿಂದುಳಿದ ಅಭಿವೃದ್ಧಿ ನಿಗಮಗಳ ಪ್ರಾಧಿಕಾರ ಅಧ್ಯಕ್ಷ ಆರ್ ರಘು ಕೌಟಿಲ್ಯರವರು 50 ಬಡ ಕುಟುಂಬಗಳಿಗೆ ಪರಿಹಾರ ಅರ್ಜಿ ಸ್ವೀಕೃತಿ ಪತ್ರವನ್ನು ಭಾನುವಾರ ವಿತರಿಸಿ ನಂತರ ಮಾತನಾಡಿದರು.
ಜೀವವಿದ್ದರೇ ಜೀವನ ನಂತರ ಸಂಪಾದನೆ. ಬದುಕಿಗೆ ಆದ್ಯತೆ ಕೊಡಬೇಕು ಎಂದ ಅವರು ತಿಳಿಸಿದರು.
ಆರ್ಥಿಕ ಪರಿಸ್ಥಿತಿ ಸುಧಾರಣೆಯ ಸಲುವಾಗಿ ರಾಜ್ಯಸರ್ಕಾರದಿಂದ ಕೋವಿಡ್ 2ನೇ ಅಲೆಯ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರು ಅಸಂಘಟಿತ ವಲಯದ ಅಡಿಯಲ್ಲಿ ಶ್ರಮಿಸುವ ವರ್ಗಕ್ಕೆ 2000 ರೂ.ಗಳ ಆರ್ಥಿಕ ಸಂಕಷ್ಟ ಪರಿಹಾರವನ್ನ ಬಿಡುಗಡೆ ಮಾಡಿದ್ದಾರೆ. ಜೀವಧಾರ ಪದವೀಧರ ಘಟಕ ವತಿಯಿಂದ ಸೇವಾಸಿಂಧೂ ಪೆÇೀರ್ಟಲ್ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದ್ದು ಇದರ ಸದುಪಯೋಗವನ್ನ ಕಡುಬಡಕುಟುಂಬ ಸೂಕ್ತ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವೃತ್ತಿ ಧೃಡಿಕರಣಪತ್ರ ಮತ್ತು ಭಾವಚಿತ್ರವನ್ನು ನೀಡಿ ನಾಗರೀಕರು ಇದರ ಸವಲತ್ತನ್ನು ಪಡೆಯಬಹುದಾಗಿದೆ ಇದಕ್ಕಾಗಿ ಸಹಾಯವಾಣಿಯನ್ನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ತರೆಯಲಾಗಿದೆ ಎಂದವರು ತಿಳಿಸಿದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಅವರು ಮಾತನಾಡಿ, ಕೋವಿಡ್ ನಿಯಂತ್ರಣ ಮಾರ್ಗಸೂಚಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನ ನಾಗರೀಕರು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸವಿತಾಸಮಾಜದ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ರಮೇಶ್ ಕುಮಾರ್ ರವರು ಮಾತನಾಡಿ, ಲಾಕ್ ಡೌನ್ ಸಂಧರ್ಭದಲ್ಲಿ ಕ್ಷೌರಿಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವ ಕಾರಣದಿಂದಾಗಿ ಮೈಸೂರು ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಕ್ಷೌರಿಕರು ತೊಂದರೆಯಲಿದ್ದಾರೆ. ದಿನಕ್ಕೆ ಹತ್ತು ಮಂದಿಗಾದರೂ ಕ್ಷೌರಿಕ ಕಾರ್ಯ ನೆರವೇರಿಸಲೂ ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ನಗರಪಾಲಿಕೆ ಸದಸ್ಯ ಎಂ. ಸತೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರಾದ ರೇಣುಕಾ ರಾಜ್, ಜೀವಧಾರ ಪದವೀಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಮಹಿಳಾ ಮೋರ್ಛಾ ನಗರ ಉಪಾಧ್ಯಕ್ಷೆ ಸರಸ್ವತಿ ಪ್ರಸಾದ್, ಸವಿತಾ ಸಮಾಜದ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರಮೇಶ್ ಬ್ರಹ್ಮಾಚಾರ್, ಪೃಥ್ವಿ ಸಿಂಗ್ ಚಂದಾವತ್ ಇನ್ನಿತರರು ಇದ್ದರು.