ರಕ್ತದಾನಿಗಳು ಕೊರೊನಾ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ -ಶಾಸಕ ಎಸ್. ಎ ರಾಮದಾಸ್

ಮೈಸೂರು: ರಕ್ತದಾನಿಗಳು ಕೊರೊನಾ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಶಾಸಕ ಎಸ್. ಎ ರಾಮದಾಸ್ ಅವರು ಹೇಳಿದರು.
ನಗರದ ಎಂ ಜಿ ರಸ್ತೆಯಲ್ಲಿರುವ ತೇರಾಪಂಥ್ ಭವನದಲ್ಲಿ ಭಾನುವಾರ ಶಾಸಕ ರಾಮದಾಸ್ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ರಕ್ತದಾನ ಶಿಬಿರ ರಕ್ತದಾನಿಗಳಲ್ಲಿ ಆತ್ಮಸ್ಥೈರ್ಯ ತುಂಬಿದೆ. ಶಸ್ತ್ರ ಚಿಕಿತ್ಸೆ ಮತ್ತು ಹೆರಿಗೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿದೆ ರಕ್ತನಿಧಿ ಕೇಂದ್ರಗಳಲ್ಲೂ ಸಹ ರಕ್ತ ಶೇಖರಿಕೆ ಪ್ರಮಾಣ ಕುಂದುತ್ತಿದೆ ಹಾಗಾಗಿ ರಕ್ತ ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದಾದರೆ ನಮ್ಮ ತಂಡದ ವತಿಯಿಂದ ಮನೆಯಿಂದಲೇ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ವಾಪಸ್ ಮನೆಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಜೂ. 16ರಂದು ಸ್ಥಳೀಯ ಬೂತ್ ಮಟ್ಟದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುವುದು. ಜೂ. 21ರಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡುವ ಕಾರ್ಯಕ್ಕೆ ಮುಂದಾಗುತ್ತಿದ್ದು ಸಾರ್ವಜನಿಕರು ಇದರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ತೇರಾಪಂತ್ ಯುವಕ ಪರಿಷತ್ ಹಾಗೂ ರೋಟರಿ ಸಂಸ್ಥೆ ಹಾಗೂ ಆರ್ ಜಿಎಸ್ ಮೈಸೂರು ಹ್ಯೂಮನ್ ಟಚ್ ವತಿಯಿಂದ
ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ರೇಣುಕರಾಜ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆರ್. ಜಿ. ಎಸ್. ಗ್ರೂಪ್ ಅಧ್ಯಕ್ಷ ದೇವೇಂದ್ರ ಪರಿಹಾರಿಯ, ಪರಿಸರ ಜಾಗೃತಿ ಅಧ್ಯಕ್ಷ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಅಖಿಲ ಭಾರತೀಯ ತೇರಾಪಂಥ್ ಯುವ ಪರಿಷತ್ ಅಲೋಕ್ ಚಾಜೇಡ್, ಸಂಜಯ್, ದಿನೇಶ್ ಮಾರುತಿ, ದಿನೇಶ್ ದಕ್, ಪೃಥ್ವಿ ಸಿಂಗ್ ಚಂದಾವತ್ ಹಾಗೂ ಇನ್ನಿತರರು ಹಾಜರಿದ್ದರು.