ಮೈಸೂರು: ನನ್ನ ತಂದೆ ಅವರನ್ನು ಹತ್ತಿಕ್ಕಲು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಹೇಳಿದರು.
ನಗರದಲ್ಲಿ ಭಾನುವಾರ ಅಮಿತ್ ದೇವರಹಟ್ಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾನು 2017ರಲ್ಲಿ ಹಿನಕಲ್ ಬಳಿ ನಿಯಮಾನುಸಾರ ಜಮೀನು ಖರೀದಿಸಿದ್ದೇನೆ. ಜಮೀನಿನ ಸುತ್ತ ಕಾಂಪೌಂಡ್ ಹಾಕಿಕೊಂಡಿದ್ದೇನೆ ಎಂದು ಅಮಿತ್ ತಿಳಿಸಿದರು.
ಆ ಜಮೀನನ್ನು ಖಾತೆ ಮಾಡಿಸಿಕೊಂಡಿರುವುದಾಗಿ ಯೋಗೀಶ್ ಎಂಬುವರು ಹೇಳಿಕೊಂಡಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಇಷ್ಟು ದಿನಗಳ ಕಾಲ ಈ ಬಗ್ಗೆ ಮಾತನಾಡಿರಲಿಲ್ಲ ಎಂದು ಹೇಳಿದರು.
ಅದಕ್ಕೆ ಸೂಕ್ತ ದಾಖಲೆಗಳಿವೆ ಎಂದು ಕಾಗದ ಪತ್ರಗಳನ್ನು ಅಮಿತ್ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತಾದರೆ ಜಮೀನನ್ನು ಹಿಂತಿರುಗಿಸುತ್ತೇನೆ ಎಂದು ಅಮಿತ್ ದೇವರಹಟ್ಟಿ ಹೇಳಿದರು.
ನನ್ನ ತಂದೆ ತೋಜೋವಧೆ ಮಾಡಲು ಕೆಲವರು ನನ್ನ ಹೆಸರನ್ನು ಮುಂದೆ ತರುತ್ತಿದ್ದಾರೆಂದರು.

