ಮೈಸೂರು: ಶ್ರೀ ರಾಮನ ವಿರುದ್ಧ ಪಿತೂರಿ ಮಾಡಿದ ರಾವಣ ಉಳಿಯಲಿಲ್ಲ.! ಎಂದು ಶಾಸಕ ಎಸ್. ಎ. ರಾಮದಾಸ್ ಅವರು ಟೀಟ್ ಮಾಡುವ ಮೂಲಕ ಕಾಂಗ್ರೆಸ್ಸಿಗರಿಗೆ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.
ಅಯೋಧ್ಯಾ ರಾಮ ಮಂದಿರ ಭೂಮಿ ವಿಷಯದಲ್ಲಿ ಟ್ರಸ್ಟ್ ನವರು ಸ್ಕ್ಯಾಮ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ.! ಅದಕ್ಕ ರಾಮದಾಸ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲಾ ಕಾಂಗ್ರೆಸ್ಸಿಗರೆ. ರಾಮ ಮಂದಿರಕ್ಕೆ ಹೋರಾಡಿಲ್ಲ, ರಾಮ ಎಲ್ಲಿ ಎಂದು ರಾಮನ ಅಸ್ತಿತ್ವವನ್ನ ಪ್ರಶ್ನಿಸಿದವರು ನೀವು. ರಾಮ ಮಂದಿರಕ್ಕೆ ನೀವು ಒಂದೇ ಒಂದು ರೂ ಕಾಣಿಕೆಯನ್ನು ನೀಡಿಲ್ಲ! ಎಂದು ಟ್ವೀಟ್ ಮಾಡಿದ್ದಾರೆ ರಾಮದಾಸ್.
ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನವನ್ನು ಕೊಂಕು ಮಾಡಿ ಅಣುಕಿಸಿದ್ದೀರಿ! ಇದೀಗ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ನೋಡಿ ಹೊಟ್ಟೆ ಉರಿ ತಾಳಲಾರದೆ ರಾಮ ಮಂದಿರದ ಬಗ್ಗೆ ಸುಳ್ಳು ಹಬ್ಬಿಸಲು ನೋಡುತ್ತಿದ್ದೀರಾ.! ನೀವಿನ್ನೂ ರಾಮ ಮಂದಿರ ಭೂಮಿಯು ಬಾಬರ್ ನ ಆಸ್ತಿ ಎಂದು ಹೇಳಿಕೊಂಡು ಮತವನ್ನು ಪಡೆಯುವ ವ್ಯವಸ್ಥೆಯಲ್ಲಿಯೇ ಇದ್ದೀರ
ನೆನಪಿರಲಿ ಶ್ರೀ ರಾಮನ ವಿರುದ್ಧ ಪಿತೂರಿ ಮಾಡಿದ ರಾವಣ ಉಳಿಯಲಿಲ್ಲ.! ಹಾಗಾಗಿ ರಾಮನ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ.! ಭಗವಾನ್ ಶ್ರೀ ರಾಮ ನಿಮಗೆ ಸದ್ಭುದ್ಧಿ ನೀಡಲಿ ಎಂದು ಶಾಸಕ ರಾಮದಾಸ್ ಟ್ವೀಟ್ ಮಾಡಿದ್ದಾರೆ.
ಶ್ರೀ ರಾಮನ ವಿರುದ್ಧ ಪಿತೂರಿ ಮಾಡಿದ ರಾವಣ ಉಳಿಯಲಿಲ್ಲ -ಶಾಸಕ ಎಸ್. ಎ. ರಾಮದಾಸ್

