ಬ್ಯಾಂಕ್ ನವರ ವಿರುದ್ಧ ಕರ್ನಾಟಕ ಸೇನಾ ಪಡೆಯವರ ಪ್ರತಿಭಟನೆ

ಮೈಸೂರು: ಬ್ಯಾಂಕ್ ನವರುಗಳು ಬಡಜನರಿಗೆ ತಿಂಗಳ ಕಂತು (ಇ. ಎಂ. ಐ) ಕಟ್ಟಲು ಫೆÇೀನ್ ಮೇಲೆ ಫೆÇೀನ್ ಮಾಡಿ ಮಾನಸಿಕವಾಗಿ ತೊಂದರೆ ಕೊಡುತ್ತಿರುವುದನ್ನು ಕರ್ನಾಟಕ ಸೇನಾ ಪಡೆ ಕಛೇರಿ ಮುಂದೆ ಪ್ರತಿಭಟಿಸುವ ಮೂಲಕ ಖಂಡಿಸಲಾಯಿತು.
ಮೂರು ತಿಂಗಳಿನಿಂದ ಸರ್ಕಾರ ಜನರನ್ನು ಹೊರ ಬರಬೇಡಿ, ಮನೆಯಲ್ಲಿಯೇ ಇರಿ, ಎಂದು ಹೇಳಿ ಜನರಿಗೆ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ, ಒಂದೊತ್ತು ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಬ್ಯಾಂಕಿನವರು ಸಾಲ ತೆಗೆದುಕೊಂಡವರಿಗೆ ದಿನಾಲು ಫೆÇೀನ್ ಮಾಡಿ, ವಸೂಲಾತಿಗೆ ಹುಡುಗನನ್ನು ಮನೆಗೆ ಕಳುಹಿಸಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ
ಹೇಳಿದ್ದಾರೆ.
ನೀರವ್ ಮೋದಿ, ವಿಜಯ ಮಲ್ಯ ಅವರು ಸಾವಿರಾರು ಕೋಟಿ ರೂ. ನುಂಗಿದರೂ ಬ್ಯಾಂಕ್ ಅವರಿಗೆ ಏನು ಮಾಡಲಿಲ್ಲ, ಜನಸಾಮಾನ್ಯರಿಗೆ, ಬಡವರಿಗೆ ತೊಂದರೆ ಕೊಡುತ್ತಿದ್ದಾರೆ ಸಣ್ಣ ಪುಟ್ಟ ಸಾಲ ವಸೂಲಾತಿಗೆ ಇಂತಹ ಸಮಯದಲ್ಲಿ ಬ್ಯಾಂಕುಗಳು ಸಹ ಮಾನವೀಯ ಧರ್ಮ ಮೆರೆಯಬೇಕು. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಜನರು ಸಾಲ ಪಾವತಿಸುತ್ತಾರೆಂದರು.
ಈ ಕೂಡಲೇ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಮಧ್ಯೆ ಪ್ರವೇಶಿಸಿ ಸರ್ಕಾರಿ, ಖಾಸಗಿ ಬ್ಯಾಂಕ್, ಖಾಸಗಿ ಫೈನಾನ್ಸ್ ಗಳಿಗೆ ಕಳೆದ ವರ್ಷದಂತೆ, ಸಾಲ ಮರುಪಾವತಿಗೆ 6 ತಿಂಗಳುಗಳ ಕಾಲಾವಕಾಶ ನೀಡಬೇಕೆಂದು ಆದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.
ಕರ್ನಾಟಕ ಸೇನಾ ಪಡೆಯ ಡಾ. ಶಾಂತರಾಜೇಅರಸ್, ಡಾ. ಮೊಗಣ್ಣಾಚಾರ್ ಎಂ, ಮಂಜುನಾಥ್, ಗಣೇಶ್ ಪ್ರಸಾದ್, ಬಸವರಾಜು, ಚಂದ್ರ ಉಪಸ್ಥಿತರಿದ್ದರು.