ಮೈಸೂರಲ್ಲಿ ವ್ಯಾಪಾರಿಕರಣಕ್ಕಿಂತ ಭಾವನೆಗಳ ಜೊತೆ ಬದುಕುವವರೇ ಹೆಚ್ಚು – ಶ್ರೀಹರಿ

ಮೈಸೂರು: ಮೈಸೂರಲ್ಲಿ ವ್ಯಾಪಾರಿಕರಣ ಕ್ಕಿಂತ ಭಾವನೆಗಳ ಜೊತೆ ಬದುಕುವವರೇ ಹೆಚ್ಚಿರುವುದರಿಂದ ಮೈಸೂರು ಯೋಗಕ್ಕೆ ವಿಶ್ವದಲ್ಲೇ ಮಾನ್ಯತೆ ಇದೆ ಎಂದು ಹಿರಿಯ ಯೋಗಾಚಾರ್ಯರಾದ ಶ್ರೀಹರಿ ಅಭಿಪ್ರಾಯ ಪಟ್ಟರು

ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್  ಹಾಗೂ ಹಿಮಾಲಯ ಫೌಂಡೇಷನ್ ಸಹಯೋಗದೊಂದಿಗೆ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರುಗಳಿಗೆ ಯೋಗ ವೈಢೂರ್ಯ  ಪ್ರಶಸ್ತಿ-2021 ಪ್ರದಾನ ಮಾಡಲಾಯಿತು.

ನಂತರ ಶ್ರೀಹರಿ ಅವರು  ಮಾತನಾಡಿ, ಇಂದು ಭಾರತದಾದ್ಯಂತ  ಅಸಂಖ್ಯಾತ ಯೋಗಕೇಂದ್ರ ಗಳಿದ್ದರೂ ವಿದೇಶಿಯರು ಮೈಸೂರಿಗೆ ಅಧಿಕ ಸಂಖ್ಯೆಯಲ್ಲಿ ಯೋಗ ಕಲಿಯಲು ಆಗಮಿಸುತ್ತಾರೆ ಎಂದರೆ  ಅದಕ್ಕೆ ಇಲ್ಲಿನ ಪರಂಪರೆಯೇ ಕಾರಣ ಎಂದರು.

ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಮೈಸೂರಿನಲ್ಲಿ ಯೋಗ ಉನ್ನತವಾಗಿ ಬೆಳೆಯಲು ಶ್ರೀ ಕೃಷ್ಣಮಾಚಾರ್ಯರು ಹಾಕಿಕೊಟ್ಟ ಮೇಲ್ಪಂಕ್ತಿ ಕಾರಣವಾಗಿದೆ.ಇವರ ನಂತರ ಅದೇ ಹಾದಿಯಲ್ಲಿ ಸಾಗಿ ಬಂದ ಡಾ. ಬಿ ಕೆ ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಯೋಗವನ್ನು ವಿಶ್ವದಾದ್ಯಂತ ಪ್ರಚಾರ ಪಡಿಸಿದರು ಎಂದು ತಿಳಿಸಿದರು .

ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಡಿ ಟಿ ಪ್ರಕಾಶ್, ಕೊರನಾ ಸಂದರ್ಭವಾದ್ದರಿಂದ ಯೋಗವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗದ ಈ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ ಯೋಗ ಸಾಧಕರುಗಳನ್ನು  ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದೇ ಹೆಗ್ಗಳಿಕೆಯ ವಿಚಾರ ಎಂದರು.

ರಾಕೇಶ್ ಸಿ ಶಿವರಾಮು,  ಎಸ್. ಶ್ರೀಹರಿ, ಶ್ರೀಮತಿ ಎನ್ ಆಶಾದೇವಿ, ರಾಕೇಶ್ ಜೈನ್ ಮತ್ತು  ಎಂ. ಪಿ. ರಮೇಶ್ ಬಾಬುರವರಿಗೆ ಯೋಗ ವೈಡೂರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಉದ್ಯಮಿ ಅಪೂರ್ವ  ಸುರೇಶ್, ಶಾಂತರಾಜ ಅರಸ್, ಯೋಗ ಶಿಕ್ಷಕ ಅನಂತ್ ದೀಕ್ಷಿತ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜಾ ವಿಕ್ರಮ ಅಯ್ಯಂಗಾರ್, ಖ್ಯಾತ ವ್ಯಂಗ್ಯಚಿತ್ರಕಾರ ಎಂ ವಿ ನಾಗೇಂದ್ರ ಬಾಬು, ಕೆ ಎಸ್ ಮುಕುಂದ್ ಹಾಗೂ ಇನ್ನಿತರರು ಇದ್ದರು.