ಮತ್ತೇರಿಸುವ ಸುದ್ದಿ ಕೊಟ್ಟ ಸಚಿವ ಗೋಪಾಲಯ್ಯ!: ಲಾಕ್ಡೌನ್ನಲ್ಲೇ ಹೆಚ್ಚು ‘ಎಣ್ಣೆ’ ಮಾರಾಟ

ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಅಬಕಾರಿ ಇಲಾಖೆಗೆ ಹೆಚ್ಚು ಆದಾಯ ಹರಿದು ಬಂದಿದೆ.

ಸಾಮಾನ್ಯ ದಿನಗಳಿಗಿಂತ ಹೆಚ್ಚು ಆದಾಯವನ್ನು ಅಬಕಾರಿ ಇಲಾಖೆ ಕೊರೊನಾ ಲಾಕ್‌ಡೌನ್‌ ಸಂದಭಲ್ಲಿ ಗಳಿಸಿದೆ.

ಇಲಾಖೆಯ ಲಾಭದಲ್ಲಿ ಶೇ. 10ರಷ್ಟು ಹೆಚ್ಚಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ತಿಳಿಸಿದ್ದಾರೆ.

ಕೋವಿಡ್ ಲಾಕ್‌ಡೌನ್ ಆದ ಮೇಲೆ ಏ. 1ರಿಂದ ಜೂ. 15ರ ವರೆಗೆ ಅಬಕಾರಿ ಇಲಾಖೆಗೆ 4,500 ಕೋಟಿ ರೂ. ವರಮಾನ ಬಂದಿದೆ. ಇದು ಸಾಮಾನ್ಯ ದಿನಗಳಿಗಿಂತ ಶೇ. 10ರಷ್ಟು ಹೆಚ್ಚು ಲಾಭ ಎಂದಿದ್ದಾರೆ. ಇದರಿಂದ ಸರಕಾರದ ಆದಾಯ ಹೆಚ್ಚಾಗಿದೆ ಎಂದು ಅವರು ಸಚಿವತು ತಿಳಿಸಿದ್ದಾರೆ.