ಕೊರೊನಾ ಲಸಿಕೆ ಪಡೆದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುವುದಿಲ್ಲ

ನವ ದೆಹಲಿ: ಕೊರೊನಾ ಲಸಿಕೆ ಪಡೆದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುವುದಿಲ್ಲ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕೊರೊನಾ ಲಸಿಕೆ ಪಡೆಯುವುದರಿಂದ ಸ್ತ್ರೀ ಮತ್ತು ಪುರುಷರಲ್ಲಿ ಬಂಜೆತನ ಉಂಟಾಗುವ ಸಾಧ್ಯತೆ ಇದೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಇದು ಸುಳ್ಳು ಎಂದು ಸಚಿವಾಲಯ ತಿಳಿಸಿದೆ.
ಲಸಿಕೆಯಿಂದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗಬಹುದೇ? ಎಂದು “ನ್ಯಾಷನಲ್ ಎಕ್ಸ್ಪರ್ಟ್ ಗ್ರೂಪ್ ಫಾರ್ ಕೋವಿಡ್ -19” ಸಂಶೋಧನೆ ನಡೆಸಿದ್ದು, ಈ ಸಂಶೋಧನೆಗಾಗಿ ಲಸಿಕೆ ಪಡೆದ ತಲಾ 45 ಜನ ಮಹಿಳೆಯರು ಮತ್ತು ಪುರುಷರನ್ನು ಆಯ್ಕೆ ಮಾಡಿ,ಇವರ ಆರೋಗ್ಯದ ಬಗ್ಗೆ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲ ಗಮನವಹಿಸಲಾಗಿತ್ತು.
ಈ ವೇಳೆ ಲಸಿಕೆ ಪಡೆದವರಲ್ಲಿ ವೀರ್ಯದ ಪ್ರಮಾಣ, ವೀರ್ಯ ಸಾಂದ್ರತೆ, ವೀರ್ಯ ಚಲನಶೀಲತೆ ಮತ್ತು ಒಟ್ಟು ಮೋಟೈಲ್ ವೀರ್ಯಾಣುಗಳ ಸಂಖ್ಯೆ ಸೇರಿದಂತೆ ಯಾವುದೇ ವೀರ್ಯ ನಿಯತಾಂಕಗಳಲ್ಲಿ ಕಡಿತವಾಗಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಪುರುಷರು ಮತ್ತು ಹಸುಗೂಸಿಗೆ ಹಾಲುಣಿಸುವ ಮಹಿಳೆಯರೂ ಕೊರೊನಾ ಲಸಿಕೆ ಪಡೆಯಬಹುದು. ಇದರಲ್ಲಿ ಯಾವುದೇ ಅಪಾಯ ಇಲ್ಲ ಎಂದು ನ್ಯಾಷನಲ್ ಎಕ್ಸ್ಪರ್ಟ್ ಗ್ರೂಪ್ ಫಾರ್ ಕೋವಿಡ್ -19 ಶಿಫಾರಸು ಮಾಡಿದೆ.
ಈ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ, ಕೊರೋನಾ ಸೋಂಕಿನ ವಿರುದ್ದ ನೀಡುವ ಲಸಿಕೆಯಿಂದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುತ್ತದೆ ಎಂದು ಹೇಳಲು ಯಾವುದೆ ವೈಜ್ಞಾನಿಕ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.