ತುರ್ತು ಪರಿಸ್ಥಿತಿ ಘೋಷಣೆ ದಿನವನ್ನು ಕರಾಳ ದಿನವನ್ನಾಗಿ ಆಚರಣೆ

ಮೈಸೂರು: ತುರ್ತು ಪರಿಸ್ಥಿತಿಯ ಘೋಷಣೆ ದಿನವನ್ನು ಜೂ. 25ರಂದು ಕರಾಳದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಕರಾಳ ದಿನಾಚರಣೆಯ ಜಿಲ್ಲಾ ಸಂಚಲನಾ ಸಮಿತಿ ಸಂಚಾಲಕ ಆರ್ ಗೋಪಾಲ್ ರಾವ್ ತಿಳಿಸಿದರು.

ಮೈಸೂರಿನ ಬಿಜೆಪಿ ಕಛೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ದಿನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ನಮ್ಮ ಅಂಗಸಂಸ್ಥೆ, ಎಲ್ಲರೂ ಸೇರಿ ಕರಾಳ ದಿನ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

ಸಾರ್ವಭೌಮತ್ವವನ್ನು ಮೆರೆಯುವುದಕ್ಕೋಸ್ಕರ, ತನ್ನ ಸ್ವಾರ್ಥಕ್ಕೋಸ್ಕರ ಅಲಹಾಬಾದ್ ಉಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಧಿಕ್ಕರಿಸಿ, ಅದನ್ನು ಊರ್ಜಿತಗೊಳ್ಳಲು ಅವಕಾಶ ನೀಡಬಾರದೆನ್ನುವ ದೃಷ್ಟಿಯಲ್ಲಿ ತನ್ನದೇ ಧೋರಣೆಯನ್ನು ಅನುಸರಿಸಿ ಈ ದೇಶಕ್ಕೆ ಒಂದು ಕಪ್ಪು ಛಾಯೆಯನ್ನು ತಂದರೋ ಅದನ್ನು ನಾವು ಕರಾಳ ದಿನವೆಂದು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯ ದಿನದಲ್ಲಿ ನೊಂದ, ಬಂಧಕ್ಕೊಳಗಾದವರು, ಸಂಗ್ರಾಮದಲ್ಲಿ ಭಾಗವಹಿಸಿದ್ದವರನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ. ಹೋರಾಟದಲ್ಲಿ ಗೆಲುವು ಸಾಧಿಸಿದ್ದೇವೆ. ತೊಂದರೆ ಅನುಭವಿಸಿದವರಿಗೆ ಕೃತಜ್ಞತೆ ಹೇಳಬೇಕು. ತುರ್ತು ಪರಿಸ್ಥಿತಿಯ ಘೋಷಣೆ ದಿನವನ್ನು ಜೂ. 25ರಂದು ಕರಾಳದಿನವನ್ನು ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಾಸಯ್ಯ ಸಂಚಾಲಕ ವೀರೇಶ್ ಉಪಸ್ಥಿತರಿದ್ದರು.