ಮೈಸೂರು: ನಾನು ಕೂಡ ಸಿಎಂ ಆಕಾಂಕ್ಷಿ, ಹಾಗಂತ ನಾನು ನನ್ನ ಬೆಂಬಲಿಗರಿಂದ ಹೇಳಿಸುವಂತದ್ದಲ್ಲ ಎಂದು ಶಾಸಕ ತನ್ವಿರ್ ಸೇಠ್ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ತನ್ವೀರ್ ಸೇಠ್ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದರು.
ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ, ಹಿಂದೆ ಕೂಡ ನಾನು ಹೇಳಿದ್ದೆ. ಪೈಪೋಟಿ ಮಾಡುವುದರಲ್ಲಿ ನಾನು ಕೂಡ ಅಷ್ಟೇ ಸಮರ್ಥವಾಗಿ ಬೆಳೆದಿದ್ದೇನೆ. ನಾನು ಕೂಡ ಸಿಎಂ ಆಕಾಂಕ್ಷಿ. ಹಾಗಂತ ನಾನು ನನ್ನ ಬೆಂಬಲಿಗರಿಂದ ಹೇಳಿಸುವಂತದ್ದಲ್ಲ ಎಂದು ತನ್ವೀರ್ ಸೇಠ್ ಮಾಮಿಕವಾಗಿ ನುಡಿದರು.
ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ, ನಂತರ ನಾಯಕರ ಆಯ್ಕೆ ಮಾಡುವುದು ವರಿಷ್ಠ ರಿಗೆ ಬಿಟ್ಟಿದ್ದು ಎಂದು ಹೇಳಿದರು.

