ಬೆಳಗಾವಿ: ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೋಲಿಸೋಕೆ ಕಾಂಗ್ರೆಸ್ ಮುಂದಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಸವದಿ, ಕೂಸು ಹುಟ್ಟೋಕೆ ಮುಂಚೆನೇ ಕುಲಾವಿ ಹೋಲಿಸೋಕೆ ಮುಂದಾಗಿದೆ ಕಾಂಗ್ರೆಸ್ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೂ ಬರಲ್ಲ, ಸಿಎಂ ಆಗೋಲ್ಲ. ಕೂಸು ಹುಟ್ಟಲ್ಲ, ಕುಲಾವಿ ಹಾಕೋ ಸಂದರ್ಭನೂ ಬರಲ್ಲ ಎಂದು ಸವದಿ ಹೇಳಿದರು.
ನೆಗೆಟಿವ್ ರಿಪೋರ್ಟ್ ಕಡ್ಡಾಯ
ಕೊರೊನ ಮೊದಲನೇ ಅಲೆ, ಎರಡನೇ ಅಲೆ ವಿಶೇಷ ಅನುಭವ ಕೊಟ್ಟಿದೆ. ಮೊದಲನೆ ಅಲೆಯಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಇರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಇವೆಲ್ಲ ಬಂದವು, ಮೂರನೇ ಅಲೆಗೂ ನಾವು ಎಚ್ಚರಿಕೆಯಿಂದಿರಬೇಕು ಎಂದರು.
ಅಂತಾರಾಜ್ಯ ಸಂಚರಿಸುವ ಪ್ರತಿ ಪ್ರಯಾಣಿಕರನ್ನು ತಪಾಸಣೆ ನಡೆಯುವ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಸವದಿ ಹೇಳಿದರು.
ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಜಿಲ್ಲೆಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುವ ಚಿಂತನೆ ಇದೆ ಎಂದವರು ತಿಳಿಸಿದರು.

