ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಸ್ಫೋಟ

ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಎರಡು ಕಡೆ ಸ್ಫೋಟ ಸಂಭವಿಸಿದೆ.

ಈ ಸ್ಪೋಟದದಿಂದ ಇಬ್ಬರಿಗೆ ತೀವ್ರವಾಗಿ ಗಾಯವಾಗಿದೆ. ಯಾವುದೇ ಸಾವು ಸಂಭವಿಸಿಲ್ಲ.

2 ಡ್ರೋನ್ ಗಳ ಬಳಕೆ
ಜಮ್ಮು ವಿಮಾನ ನಿಲ್ದಾಣದ ಸ್ಪೋಟ ನಡೆಸಲು 2 ಡ್ರೋನ್ ಗಳನ್ನು ಬಳಸಲಾಗಿದೆ.

ಭಾನುವಾರ ಮುಂಜಾನೆ 1.40ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟದಿಂದ ಕಟ್ಟಡದ ಮೇಲ್ಚಾವಣಿಗೆ ಹಾನಿಯಾಗಿದೆ. ಎರಡನೆಯ ಸ್ಫೋಟ ನೆಲದ ಮೇಲೆ ಬಿದ್ದು ಸ್ಪೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.