ಮೈಸೂರು: ನಗರದ ಬಿಜೆಪಿ ಕಾರ್ಯಲಯದಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ನಂತರ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ಮಾತನಾಡಿ, ಇವತ್ತೇನು ನಾವು ಆರ್ಕಿಟೆಕ್ಟ್ ಅದು ಇದು ಎಂದು ಹೇಳುತ್ತೇವೆ ಅವತ್ತಿನ ಕಾಲಕ್ಕೆ ಮಾಡಿದಂತಹ ಕೆಂಪೇಗೌಡರ ಸ್ಮರಣೆಯನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೆಂಪೇಗೌಡರು ಒಂದು ಜಾತಿಗೆ ಸೀಮಿತ ಅಲ್ಲ. ಯಾವ ರೀತಿ ಮಹಾಪುರುಷರು, ಪುಣ್ಯಪುರುಷರನ್ನು ಸ್ಮರಣೆಯನ್ನು ಮಾಡ್ತೀವೋ ಆ ರೀತಿಯಲ್ಲಿ ಕೆಂಪೇಗೌಡರ ಸ್ಮರಣೆಯನ್ನ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಮಾಡುತ್ತಿದ್ದೇವೆ ಎಂದು ಹೇಳಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್. ವಿ. ಫಣೀಶ್, ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ಜಿಲ್ಲಾ ಮಾಧ್ಯಮ ಪ್ರಮುಖ್ ರಾಜ ಕುಮಾರ್, ಮೃಗಾಲಯ ಪ್ರಾಧಿಕಾರ ಸದಸ್ಯ ಗೋಕುಲ್ ಗೋವರ್ಧನ್, ಬಿಜೆಪಿ ಮುಖಂಡರಾದ ರಮೇಶ್, ಆನಂದ್, ಬಿಜೆಪಿ ನಗರ ಜಿಲ್ಲಾ ಉಪಾಧ್ಯಕ್ಷ ಶಾಂತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಕಾರ್ಯಾಲಯ ಕಾರ್ಯದರ್ಶಿ ಚೇತನ್, ಪರಮೇಶ್ ಗೌಡ, ಬಿಜೆಪಿ ರೈತ ಮೋರ್ಚಾ ನಗರಾಧ್ಯಕ್ಷ ದೇವರಾಜ್, ಕಿರಣ್ ಗೌಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್, ನರಸಿಂಹರಾಜ ಕ್ಷೇತ್ರದ ಉಪಾಧ್ಯಕ್ಷ ಹೇಮಂತ್, ಮಧು, ಆನಂದ್, ನರಸಿಂಹರಾಜ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷ ಶಶಿ, ನಾಣಿಗೌಡ,ಮಂಜು ಸಿ. ಗೌಡ ಹಾಗೂ ಇನ್ನಿತರರಿದ್ದರು.

