ಶಾಸಕ ಯತೀಂದ್ರರ ಹುಟ್ಟುಹಬ್ಬ ಅಂಗವಾಗಿ ಆಹಾರ ಕಿಟ್ ವಿತರಣೆ

ಮೈಸೂರು: ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ 64 ಮತ್ತು 65ನೇ ವಾರ್ಡಿನ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ ನವೀನ್ ಕುಮಾರ್, ಯತೀಂದ್ರ ಸಿದ್ದರಾಮಯ್ಯರವರು ವೈದ್ಯರಾಗಿದ್ದರೂ ಜನ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರು ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದು ಇಂತಹರು ರಾಜಕೀಯ ಕ್ಷೇತ್ರದಲ್ಲಿ ಯುವ ನಾಯಕರಾಗಿ ಹೊರಹೊಮ್ಮಿದ್ದು ನಮ್ಮೆಲ್ಲರ ಭಾಗ್ಯ ಹಾಗೂ ಮುಂಬರುವ ದಿನಗಳಲ್ಲಿ ಇವರು ಇನ್ನು ಉನ್ನತ ಸ್ಥಾನಕ್ಕೆ ಏರಬೇಕೆಂದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ವಿಪ್ರ ಮುಖಂಡರಾದ ಡಾ. ರಘುರಾಮ್ ವಾಜಪೇಯಿ, ನಟರಾಜ್ ಜೋಯಿಸ್, ಕಾಂಗ್ರೆಸ್ ಮುಖಂಡರಾದ ಎಂ. ರಾಜೇಶ್, ಶೋಭಾ ರಾಜೇಶ್, ಲಲಿತಾದ್ರಿ ಡ್ರೈವಿಂಗ್ ಸ್ಕೂಲ್ ಮಾಲೀಕ ಸುರೇಶ್, ವಿಪ್ರ ಮುಖಂಡ ಫಣೀಶ್, ಕಾಂಗ್ರೆಸ್ ಮುಖಂಡ ಶ್ರೀನಿವಾಸ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್, ದೇವರಾಜ್ ಅರಸು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪೈಲ್ವಾನ್ ಸುನೀಲ್, ಸೈಯದ್ ಅಬ್ಬಾಸ್, ಸೈಯದ್ ರಿಜ್ವಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.