ಜೆಕೆ ಟೈರ್ ಮುಖ್ಯಸ್ಥ ಹರಿಶಂಕರ್ ಸಿಂಘಾನಿಯಾ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ

ಮೈಸೂರು: ಜೆಕೆ ಟೈರ್ ವ್ಯವಸ್ಥಾಪಕ ದಿವಂಗತ ಹರಿಶಂಕರ್ ಸಿಂಘಾನಿಯಾ 88ನೇ ಜನ್ಮದಿನದ ಪ್ರಯುಕ್ತ ಅವರ ನೆನಪಿನಾರ್ಥವಾಗಿ
ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಬುಧವಾರ ಜೆಕೆ ಟೈರ್ ವತಿಯಿಂದ ಕೆ ಆರ್ ಎಸ್ ರಸ್ತೆಯಲ್ಲಿರುವ ಜೆಕೆ ಟೈರ್ ಆವರಣದಲ್ಲಿ ಸಿಬ್ಬಂದಿಗಳು ವರ್ಗದವರು ಸ್ವಯಂ ಪ್ರೇರಿತವಾಗಿ 500 ಯೂನಿಟ್ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಂತರ ಜೆಕೆ ಟೈರ್ ಮಾನವ ಸಂಪನ್ಮೂಲ ಅಧಿಕಾರಿ ವಿಕ್ರಮ್ ಹೆಬ್ಬಾರ್ ಮಾತನಾಡಿ, ನಮ್ಮ ಜೆಕೆ ಟೈರ್ ನ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಹರಿಶಂಕರ್ ಸಿಂಘಾನಿಯಾ ಅವರ ಜನ್ಮ ದಿನದಂದು ರಕ್ತದಾನ ಏರ್ಪಡಿಸಿದ್ದು ಈ ವರ್ಷ ಕೋವಿಡ್ ಭೀತಿಯಿಂದ ರಕ್ತದ ಕೊರತೆ ಎದುರಾಗಿದ್ದು ಅದನ್ನು ಸರಿದೂಗಿಸುವ ಸಲುವಾಗಿ ಇನ್ನೂ ಹೆಚ್ಚಿನ ಜನರನ್ನು ಪ್ರೇರೇಪಿಸುವ ಸಲುವಾಗಿ ಸಿಬ್ಬಂದಿ ವರ್ಗದ ಕುಟುಂಬ ಸಮೇತರಾಗಿ ಬಂದು ರಕ್ತದಾನ ಮಾಡಿದ್ದಾರೆಂದರು.

ನಮ್ಮ ಕಾರ್ಖಾನೆಯ ಮಾಲೀಕರು ನಮ್ಮೆಲ್ಲರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಈಗ ಅವರು ಸ್ವರ್ಗೀಯರಾಗಿದ್ದು, ರಕ್ತದಾನ ಮಾಡುವ ಮೂಲಕ ನಾವು ಅವರಿಗೆ ಈ ರೀತಿ ಗೌರವ ತೋರುತ್ತಿದ್ದೇವೆ ಎಂದರು.

ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆತಂಕ ಬಿಟ್ಟು ರಕ್ತದಾನ ಮಾಡಿ. ಸಾರ್ವಜನಿಕರು ಧೈರ್ಯವಾಗಿ ರಕ್ತದಾನ ಮಾಡಬಹುದು ಎಂದು ಹೇಳಿದರು.

ಕೊರೊನಾ ತಡೆಗೆ ಲಸಿಕೆ ಹಾಕಿಸಿಕೊಳ್ಳಿ ಎಂಬ ಸರ್ಕಾರದ ಆದೇಶಕ್ಕೆ ಮಣಿದ ಯುವಪೀಳಿಗೆ ಲಸಿಕೆ ಹಾಕಿಸಿಕೊಳ್ಳುವುದರಲ್ಲಿ ಮಗ್ನರಾಗಿ ರಕ್ತದಾನದ ಮಹತ್ವ ಮರೆತಿರುವುದು ಬೇಸರದ ಸಂಗತಿ. ದಯಮಾಡಿ ಯುವ ಸಮೂಹ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕ್ಷಯ ನಿರ್ಮೂಲನಾ ಅಧಿಕಾರಿ ಡಾ॥ಶಿರಾಜ್ ಅಹ್ಮದ್, ಜನರಲ್ ಮ್ಯಾನೇಜರ್ ವಿಕ್ರಂ ಹೆಬ್ಬಾರ್, ಜೆಕೆ ಟೈರ್ಸ್ ಉಪಾಧ್ಯಕ್ಷ ಈಶ್ವರ ರಾವ್ ಹಾಗೂ ಮಹದೇವು, ಸುಪ್ರಿಯಾ ಸೆಲ್ವನ್, ಅಗಸ್ಟಿನ್, ಸತ್ಯೇಂದ್ರ ಶ್ಯಾಮ್ ಚರಣ್, ಸವಿತ ಮಲ್ಲಪ್ಪ, ಅನಿತಾ ಅಯ್ಯಪ್ಪ ಹಾಗೂ ಇನ್ನಿತರರು ಹಾಜರಿದ್ದರು.