ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ –ಶಾಸಕ ಯತೀಂದ್ರ

ಮೈಸೂರು: ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ವರುಣ ಕ್ಷೇತ್ರದ ಸೋಮೇಶ್ವರಪುರ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಯತೀಂದ್ರ ಅವರು ಶುಕ್ರವಾರ ಮಾತನಾಡಿದರು.

ಪಾಪದ ಕೊಡ ತುಂಬುತ್ತದೆ ಹೇಳಿಕೆಗೆ ಡಾ. ಯತೀಂದ್ರ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಯಾವುದೇ ಪಾಪ ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಸಿದ್ದರಾಮಯ್ಯ ತಾವಾಗಿ ಜೆಡಿಎಸ್ ಪಕ್ಷ ಬಿಡಲಿಲ್ಲ. ಜೆಡಿಎಸ್ನಲ್ಲಿ ಬೆಳೆಯುತ್ತಿದ್ದ ನಾಯಕರನ್ನು ಮೊಟಕುಗೊಳಿಸಲು ಉಚ್ಚಾಟಿಸಲಾಯಿತು ಎಂದು ತಿಳಿಸಿದರು.

ಜೆಡಿಎಸ್ನಿಂದ ಹೊರಬಂದ ಮೇಲೆ ಸಿದ್ದರಾಮಯ್ಯ ಅವರಿಗೆ ತುಂಬಾ ಒಳ್ಳೆಯದೇ ಆಗಿದೆ ಈಗಲೂ ಒಳ್ಳೆಯದೇ ಆಗುತ್ತಿದೆ ಎಂದು ಯತೀಂದ್ರ ಹೇಳಿದರು.