ಮೈಸೂರು: ನಗರದ ಮಂಡಿ ಮೊಹಲ್ಲಾದಲ್ಲಿರುವ ಸಿ.ಎಸ್.ಐ ಮಿಷನ್ ಆಸ್ಪತ್ರೆಯಲ್ಲಿ ನವೀಕೃತ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಸ್ಪೆಷಲ್ ವಾರ್ಡ್ ವಿಭಾಗವನ್ನ ಬಿಷಪ್ ಮೋಹನ್ ರಾಜ್ ಮತ್ತು ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ಅವರು ಮಾತನಾಡಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಮಿಷನ್ ಆಸ್ಪತ್ರೆಯೆಂದರೆ ಬಡವರ್ಗದವರ ಪಾಲಿಗೆ ಆರೋಗ್ಯ ವಿಷಯದಲ್ಲಿ ಕೇಂದ್ರವಿದ್ದಂತೆ. ಇಂದು ನವೀಕೃತ 4 ಸ್ಪೆಷಲ್ ವಾರ್ಡ್ ಮತ್ತು ಆಪರೇಷನ್ ಥಿಯೇಟರ್ ಚಾಲನೆಗೊಂಡಿದ್ದು, ಆಮ್ಲಜನಕ ಘಟಕ ಸ್ಥಾಪನೆ, ಕೋವಿಡ್ ವಾರ್ಡ್ ನಿರ್ವಹಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿ ಕಾರ್ಯಗಳು ನಡೆಯುತ್ತಿದೆ ಎಂದರು,
ಯುವ ಮುಖಂಡರಾದ ಪೂರ್ವಜ್ ವಿಶ್ವನಾಥ್, ನಗರಪಾಲಿಕೆ ಸದಸ್ಯ ರಂಗಸ್ವಾಮಿ, ಇಂಜನಿಯರ್ ವೀರಪ್ಪ, ದಿಲೀಪ್, ಗುರುಪ್ರಸಾದ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

