ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ಕನಾಟಕದ 4 ಮಂದಿ ನೂತನ ಸಚಿವರಾಗಿ ಸೇರ್ಪಡೆ ಆಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಬುಧವಾರ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಕ್ಷೇತ್ರದ ಸಂಸದ ಎ. ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ರಾಜೀವ್ ಚಂದ್ರಶೇಖರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದವರು.
ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್, ರಾವು ಸಾಹೇಬ್ ದಾನ್ವೆ ಪಾಟೀಲ್, ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್ ಲಾಲ್ ಕಟಾರಿಯಾ ಸೇರಿದಂತೆ 11 ಮಂದಿಯನ್ನು ಸಂಪುಟದಿಂದ ಕೈಬಿಡಲಾಗಿದೆ.

