ಬೆಂಗಳೂರು: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಆ ಅಧಿಕಾರಿ ಬೇರ್ಯಾರು ಅಲ್ಲ ಎಡಿಜಿಪಿ ಭಾಸ್ಕರ್ ರಾವ್ ಅವರು.
ಭಾಸ್ಕರ್ ರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ತಿಳಿದು ಬಂದಿದೆ.
ಕೋವಿಡ್ ಸಂಕಷ್ಟ ಬಂದೊದಗಿದಾಗ ಸ್ವಲ್ಪವೂ ಲೋಪ ದೋಷ ಬರದಂತೆ ಬೆಂಗಳೂರನ್ನು ಸುರಕ್ಷಿತವಾಗಿ ಕಾಪಾಡಿದ ಕೀರ್ತಿ ಆಗ ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರದ್ದು.
ಇಂತಹ ಕಾರ್ಯ ವೈಖರಿಗೆ ದೇಶದಾದ್ಯಂತ ಅವರಿಗೆ ಪ್ರಶಂಸೆ ವ್ಯಕ್ತವಾಗಿತ್ತು. ಖುದ್ದು ಕೇಂದ್ರದ ಗೃಹ ಮಂತ್ರಿಗಳೇ ಇದರ ಬಗ್ಗೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ಲಾಘಿಸಿದ್ದರು.
ನಂತರದ ದಿನಗಳಲ್ಲಿ ಅವರಿಗೆ ರಾಜ್ಯ ಸರ್ಕಾರ ಕೊಟ್ಟ ಹುದ್ದೆಗಳು ಅವರ ದಕ್ಷತೆಗೆ, ಅವರ ಹುರುಪಿನ ವ್ಯಕ್ತಿತ್ವಕ್ಕೆ ಅಷ್ಟೊಂದು ಹೊಂದುವಂತದ್ದಲ್ಲ. ಆದರೂ ಹೋದ ಪ್ರತಿಯೊಂದು ಇಲಾಖೆಯಲ್ಲೂ ಅವರು ಹೊಸ ತರದ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯ ಪ್ರಕಾರ ಭಾಸ್ಕರ್ ರಾವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿಗಳಿವೆ.
ಇವರ ಕಾರ್ಯವೈಖರಿ ಬಗ್ಗೆ ಅರಿವಿರುವ ಪ್ರಧಾನಿ ಮೋದಿವ ಮತ್ತು ಅಮಿತ್ ಷಾ ಅವರು ಈ ದಕ್ಷ ಅಧಿಕಾರಿಯನ್ನು ತಮ್ಮ ಸರ್ಕಾರದಲ್ಲಿ ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ಚಿಂತಿಸಿದ್ದಾರೆಂದು ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ಭಾಸ್ಕರ್ ರಾವ್ ಅವರಿಗೆ ಗವರ್ನರ್ ನಂತಹ ಹುದ್ದೆ ಅಥವಾ ವಿಶೇಷ ಸ್ಥಾನಮಾನ ನೀಡಬಹುದು ಎಂದು ತಿಳಿದು ಬಂದಿದೆ
ಹಾಗೇನಾದರೂ ಆದರೆ ನಮ್ಮ ಕನ್ನಡದ ಐಪಿಎಸ್ ಅಧಿಕಾರಿಗೆ ತಮ್ಮ ಕಾರ್ಯವೈಖರಿಯನ್ನು ಇಡೀ ರಾಷ್ಟ್ರ ಮಟ್ಟದಲ್ಲಿ ತೋರಿಸುವ ಅವಕಾಶ ದೊರೆಯುತ್ತದೆ ಹಾಗೂ ಇದು ಕನ್ನಡಿಗರಿಗೂ ಹೆಮ್ಮೆಯ ವಿಷಯವಲ್ಲದೆ ಬೇರೇನೂ?

