ಮೈಸೂರು: ಮಕ್ಕಳು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ 2 ದಿನಗಳ ಕಾಲ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೇಳಿದರು.
ಜೀವಧಾರಾ ಪದವೀಧರರ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಲಕ್ಷ್ಮಿಪುರಂನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ , ಗುಲಾಬಿ, ಪೆನ್ನು ವಿತರಿಸಿ ಮಾತನಾಡಿದ ಅವರು ಸರ್ಕಾರ ಪರೀಕ್ಷೆಯನ್ನು 2 ದಿನಕ್ಕೆ ಸೀಮಿತ ಮಾಡಿ ಮಕ್ಕಳಿಗೆ ಯಾವುದೇ ಗೊಂದಲ ಇಲ್ಲದಂತೆ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಕೋವಿಡ್ ನಿಂದ ಈ ಬಾರಿ ಶಾಲೆಗಳೇ ನಡೆದಿಲ್ಲ .ಆನ್ ಲೈನ್ ಮೂಲಕವೇ ಅತಿಹೆಚ್ಚು ತರಗತಿ ನಡೆದಿದ್ದು ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳನ್ನು ಉತ್ತೀರ್ಣ ಮಾಡುವುದಾಗಿ ಸರ್ಕಾರ ತಿಳಿಸುವುದರಿಂದ ಯಾವ ವಿದ್ಯಾರ್ಥಿ ಕೂಡ ಧೈರ್ಯಗೆಡದೆ ಪರೀಕ್ಷೆ ಬರೆಯಬೇಕು ಎಂದು ಹೇಳಿದರು .
ಈ ಸಂದರ್ಭದಲ್ಲಿ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್ , ಖಜಾಂಜಿ ಜಯಸಿಂಹ, ಸಹ ಕಾರ್ಯದರ್ಶಿ ರಂಗನಾಥ್ , ಕೇಬಲ್ ಮಹೇಶ್ , ವಿನಯ್ ಕಣಗಾಲ್ ಹಾಗೂ ಶಿಕ್ಷಕರುಗಳು ಹಾಜರಿದ್ದರು.

