ಬೆಂಗಳೂರು: ತನಗೆ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದೆ ಎಂದು ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸೋಮವಾರ ಇಂದ್ರಜಿತ್ ಲಂಕೇಶ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ 24 ಗಂಟೆಗಳಿಂದ ದರ್ಶನ್ ಹಿಂಬಾಲಕರು ಫೋನ್ ಕರೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆಂದರು.
ದರ್ಶನ್ ಹಿಂಬಾಲಕರಿಂದ ವಾಟ್ಸಪ್ ಮೂಲಕ ಅಶ್ಲೀಲ ಪೋಸ್ಟರ್ ಗಳು ಬರುತ್ತಿವೆ. ಪ್ರಸಾರ ಮಾಡಲು ಯೋಗ್ಯವಲ್ಲದ ಪದಗಳು ಬರುತ್ತಿವೆ ಎಂದು ಇಂದ್ರಜಿತ್ ಆರೋಪಿಸಿದರು.
ಸುಮಾರ 30 ರಿಂದ 35 ಜನರಿಂದ ರಾತ್ರಿ ಹಗಲು ಫೋನ್ ಮಾಡ್ತಿದ್ದಾರೆ ಎಂದು ಅವರು ಹೇಳಿದರು.
ನಾನು ಈ ಎಲ್ಲ ನಂಬರ್ ಸಮೇತ ಸೈಬರ್ ಕ್ರೈಂಗೆ ದೂರು ನೀಡಲಿದ್ದೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

