ಆಡಿಯೋ ವೈರಲ್: ನಳಿನ್ ಕುಮಾರ್ ಕಟೀಲ್ ದೆಹಲಿ ಪ್ರವಾಸ ರದ್ದು

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಕಟೀಲ್ ಅವರು ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಕಟೀಲ್ ಅವರು ಸೋಮವಾರ ನವದೆಹಲಿಗೆ ತೆರಳಬೇಕಿತ್ತು.ಆದರೆ ಅವರ ಪ್ರವಾಸ ದಿಢೀರ್ ರದ್ದಾಗಿದೆ.

ಸಂಸತ್ತು ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ದೆಹಲಿ ಪ್ರವಾಸ ನಿಗದಿಯಾಗಿತ್ತು. ಆದರೆ ಆಡಿಯೋ ವೈರಲ್ ವಿಚಾರ ದೆಹಲಿ ಪ್ರವಾಸ ರದ್ದಿಗೆ ಕಾರಣ ಆಯ್ತಾ ಎನ್ನಲಾಗಿದೆ.

ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್ ಅಗಿತ್ತು. ಈ ಆಡಿಯೋ ತುಳು ಭಾಷೆಯಲ್ಲಿದೆ. ಯಾರಿಗೂ ಹೇಳ್ಬೇಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಈ ಟೀಮನ್ನೇ ತೆಗೀತೀವಿ. ಹೊಸ ಟೀಮ್ ಮಾಡೋದಿದೆ. ಮೂರು ಹೆಸರಿದೆ ಅದೂ ಆಗೋ ಸಾಧ್ಯತೆ ಇದೆ. ಇಲ್ಲಿನವರು ಆಗಲ್ಲ, ಡೆಲ್ಲಿಯಿಂದಲೇ ಬರ್ತಾರೆ ಎಂದೆಲ್ಲ ಮಾತುಗಳಳು ಆಡಿಯೋದಲ್ಲಿದೆ.

ಆದರೆ ಈ ಆಡಿಯೋದಲ್ಲಿರುವ ಮಾತು ನನ್ನದಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಈ ಆಡಿಯೋ ಕುರಿತು ತನಿಖೆ ನಡೆಸಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.