ಕೋವಿಡ್ 3ನೇ ಅಲೆಯಲ್ಲಿ ಬಿಜೆಪಿ ಓ.ಬಿ.ಸಿ. ಮೋರ್ಚಾ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಬೇಕು -ಜೋಗಿಮಂಜು

ಮೈಸೂರು: ಮುಂಬರುವ ಕೋವಿಡ್ ನ ಮೂರನೇ ಅಲೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕರ್ತರು ಸೈನಿಕರ ರೀತಿ ಕೆಲಸ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿಮಂಜು ಕರೆ ನೀಡಿದರು.

ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆ ನಗರದ ಸಚ್ಚಿನ್ ರಾಜೇಂದ್ರ ಭವನದಲ್ಲಿ ನಡೆಯಿತು.

ಕೋವಿಡ್ ನ ಲಾಕ್ ಡೌನ್ ನಂತರ ನಡೆದ ಸಭೆಯಲ್ಲಿ ಭಾರತ ಮಾತೆ, ಶ್ಯಾಂ ಪ್ರಸಾದ್ ಮುಖರ್ಜಿ, ಪಂಡಿತ್ ದೀನ ದಯಾಳ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸರವರು ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಟಿ.ಎಸ್.ಶ್ರೀವತ್ಸ ರವರು, ಕೋವಿಡ್-19ನ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಭಾ.ಜ.ಪ.ಕಾರ್ಯಕರ್ತರು ನಾನಾ ಸಂಧರ್ಭದಲ್ಲಿ ಸಹಾಯ ಹಸ್ತ ನೀಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

ಹಿಂದುಳಿದ ವರ್ಗದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಸವಲತ್ತುಗಳನ್ನು ನೇರ ಜನ ಸಾಮಾನ್ಯರಿಗೆ ತಲುಪಿಸಬೇಕಾದು ಕಾರ್ಯಕರ್ತರ ಕರ್ತವ್ಯ. ಅಸಂಘಟಿತ ವಲಯದಲ್ಲಿ ಇರುವ ಜನ ಸಾಮಾನ್ಯರು ನೋಂದಣಿ ಮಾಡಿಸಬೇಕು ಹಾಗೂಸಾಮನ್ಯ ಜನರಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನಗರ ಓ.ಬಿ.ಸಿ.ಅಧ್ಯಕ್ಷ ಜೋಗಿಮಂಜು ಮಾತನಾಡಿ, ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಆಡಳಿತದಲ್ಲಿ 27 ಜನ ಮಂತ್ರಿಯಾಗಿರುವುದು ಇಬ್ಬರು ರಾಜ್ಯಪಾಲರು ಆಗಿರುವುದನ್ನು ವಿರೋಧ ಪಕ್ಷ ಕಾಂಗ್ರೆಸ್ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ವಿರೋಧಿ ಎಂದು ಟೀಕಿಸಿದರು.

ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಕರ್ನಾಟಕ ರಾಜ್ಯದ 52ರಷ್ಟು ಇರುವ ಹಿಂದುಳಿದ ವರ್ಗದ ಜನ ಸಾಮಾನ್ಯರು ಭಾ.ಜ.ಪ. ಪರ ಇರುವುದು ಸಂತೋಷದ ವಿಚಾರ ಎಂದರು.

ವಿಜ್ಞಾನಿಗಳು ತಿಳಿಸಿದ ಹಾಗೆ ಹಿಂದುಳಿದ ವರ್ಗದ ಕಾರ್ಯಕರ್ತರು ಮುಂಬರುವ ಕೋವಿಡ್ ನ ಮೂರನೇ ಅಲೆಯಲ್ಲಿ ದೇಶದ ಗಡಿಕಾಯುವ ಸೈನಿಕ ರೀತಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ರಾಜ್ಯ ಬಿಜೆಪಿ ಓ.ಬಿ.ಸಿ.ಮೋರ್ಚಾದ ಕಾರ್ಯದರ್ಶಿ ಕೊಟ್ರೇಶ್, ಮೈಸೂರು ನಗರ ಬಿಜೆಪಿ ಓ.ಬಿ.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ ನಗರ ಉಸ್ತುವಾರಿ ಹರ್ಷ, ಮತ್ತು ಇನ್ನಿತರರು ಉಪಸ್ಥಿತರಿದ್ದರು.