ಮೈಸೂರು: ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ವತಿಯಿಂದ ಅಸಂಘಟಿತ ವಲಯದ ಅಡಿಯಲ್ಲಿರುವ 200 ಮಂದಿ ಪುರೋಹಿತರು, ಅರ್ಚಕರಿಗೆ ಮತ್ತು ದಿನಗೂಲಿ ನೌಕರರಿಗೆ ನಗರದ ಜಯನಗರದ ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಶಾಖೆಯಲ್ಲಿ ದಿನಸಿ ಕಿಟ್ ನ್ನು ಬುಧವಾರ ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ಮಾತನಾಡಿ, ಪುರೋಹಿತರು ಅರ್ಚಕರು ತೀರಾ ಸಂಕಷ್ಟದಲಿದ್ದಾರೆ ಇದನ್ನ ಮನಗೊಂಡು ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನಲ್ಲಿ 650 ದಿನಸಿಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ರವರು ಮಾತನಾಡಿ, ಮೈಸೂರಿನ ವಿವಿದೆಡೆ ಬ್ರಾಹ್ಮಣ ಸಂಘದ ಮೂಲಕ ಅವಶ್ಯಕವಿರುವವರಿಗೆ ಆಹಾರ ದಿನಸಿ ಕಿಟ್ ತಲುಪಿಸಲಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರ ವಿಪ್ರ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸವಲತ್ತುಗಳನ್ನು ನೀಡಲು ಮುಂದಾಗಬೇಕು. ಲಾಕ್ ಡೌನ್ ನಿಂದಾಗಿ ಅಡುಗೆಯ ವೃತ್ತಿಯ ಮೇಲೆ ಅವಲಂಭಿತರಾದವರ ಹಿತಕ್ಕಾಗಿ ಕೋವಿಡ್ ಆರ್ಥಿಕ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಸಿವಿ. ಗೋಪಿನಾಥ್, ಕೃಷ್ಣಮೂರ್ತಿಪುರಂ ರಾಮಮಂದಿರ ನಿರ್ದೇಶಕ ಅಶ್ವಥ್ ನಾರಾಯಣ್, ಅಖಿಲ ಭಾರತ ಬ್ರಾಹ್ಮಣ ಸಂಘದ ಮೈಸೂರು ಅಧ್ಯಕ್ಷ ವೆಂಕಟೇಶ್ ಪದಕಿ, ಯುವ ಮುಖಂಡ ಅಜಯ್ ಶಾಸ್ತ್ರಿ, ಸುರೇಶ್ ಇನ್ನಿತರರು ಇದ್ದರು.

