ಬಿಜೆಪಿಯಿಂದ ಕಾನೂನು ಪ್ರಕೋಷ್ಠ ಉದ್ಘಾಟನೆ

ಮೈಸೂರು: ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಉಚಿತವಾಗಿ ಕಾನೂನು ಸೇವೆ ಚಟುವಟಿಕೆ ಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ನಗರ ಭಾ.ಜ.ಪ.ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಭಾ.ಜ.ಪ.ದಲ್ಲಿ ಸುಮಾರು 26 ಪ್ರಕೋಷ್ಠಗಳು ಇದ್ದು ಸಾರ್ವಜನಿಕರ ಸೇವೆಯಲ್ಲಿ ರಾಜ್ಯ ಮತ್ತು ಕೇಂದ್ರ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಕಾನೂನು ಪ್ರಕೋಷ್ಠ ಉದ್ಘಾಟನೆ ಮಾಡಲಾಗಿದೆ ಎಂದರು.

ನಗರ ಬಿಜೆಪಿ ಕಾರ್ಯಾಲಯದಲ್ಲಿ ಪ್ರತಿ ನಾಲ್ಕನೇವಾರ ಬೆಳ್ಳಗೆಯಿಂದ ಸಂಜೆ ವರೆಗೆ ಸಾರ್ವಜನಿಕರಿಗೆ ಸೇವೆ ಮಾಡಲು ನಮ್ಮೆಲ್ಲ ವಕೀಲರು ಇರುತ್ತಾರೆ. ಹಾಗೆಯೇ ಮುಂದಿನ ದಿನದಲ್ಲಿ ಪ್ರತಿ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಕಾರ್ಯಲಯದಲ್ಲಿ ವಕೀಲರು ಹಾಗೂ ನೋಟರಿಯವರು ಉಚಿತವಾಗಿ ಜನಸಾಮಾನ್ಯರಿಗೆ ಸಲಹೆ ಹಾಗೂ ಸೇವೆಯನ್ನು ನೀಡಲಿದ್ದಾರೆಂದರು.

ಹೆಚ್ಚು ಸೇವೆಯನ್ನು ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ, ಸಿವಿಲ್ ವ್ಯಾಜ್ಯ ಕಡೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಕಾನೂನು ಸಂಚಾಲಕ ಶರತ್, ನಗರ ಸಂಚಾಲಕ ನಾಗೇಂದ್ರ ಪ್ರಸಾದ್, ಮೃಗಾಲಯ ಪ್ರಾಧಿಕಾರದ ಸದಸ್ಯ ಗೋಕುಲ್ ಗೋವರ್ಧನ್, ಕಾನುನು ಪ್ರಕೋಷ್ಠದ ಸದಸ್ಯರಾದ ಸದಸ್ಯರಾದ ಪಣೀಶ್ ಚೇತನ್ , ವಿಶ್ವನಾಥ್ ಕುಕ್ಕೆ, ಶಿವರಾಜ್, ಮಾಜಿ ಅಧ್ಯಕ್ಷ ಶಿವಕುಮಾರ್, ಸಿದ್ದೇಶ್ ಅÀವರುಗಳು ಇದ್ದರು.