ಮೈಸೂರು: ನಗರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಪ್ರಪ್ರಥಮ ಹಣ ಮರುಬಳಕೆ ಎಟಿಎಂ (ಕ್ಯಾಷ್ ರೀ ಸೈಕ್ಲರ್) ಯಂತ್ರದ ಬಳಕೆಯನ್ನ ಕಾರ್ಯಗತಕ್ಕೆ ತಂದಿರುವ ದಿ. ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹೆಚ್.ಸಿ ಕೃಷ್ಣರವರನ್ನ ಕುವೆಂಪುನಗರದಲ್ಲಿರುವ ಬ್ಯಾಂಕಿನ ಶಾಖೆ ಬಳಿ ಗುರುವಾರ ಕೆಎಂಪಿಕೆ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ದಿ. ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹೆಚ್.ಸಿ ಕೃಷ್ಣರವರು ಮಾತನಾಡಿ, ಬೆಂಗಳೂರಿನಲ್ಲಿ 12 ಶಾಖೆ ಹೊಂದಿದ್ದು ಕಳೆದ 9 ವರ್ಷಗಳಿಂದ ಮೈಸೂರಿನಲ್ಲಿ ನ್ಯಾಷನಲ್ ಬ್ಯಾಂಕ್ ಉತ್ತಮ ವಹಿವಾಟು ನಡೆಸುತ್ತಿದೆ ಎಂದರು.
ಮೈಸೂರಿನಲ್ಲೇ ಪ್ರಪ್ರಥಮ ಕೋ-ಆಪರೇಟಿವ್ ಬ್ಯಾಂಕ್ ಹಣಮರುಬಳಕೆ ಕ್ಯಾಷ್ ರೀ ಸೈಕ್ಲರ್ ಯಂತ್ರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಇದರ ಬಳಕೆಯನ್ನ ನಾಗರೀಕರು ಹೆಚ್ಚಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಗರಪಾಲಿಕೆ ಸದಸ್ಯ ಎಂ.ಸಿ ರಮೇಶ್, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಆರ್ ಬಾಲಕೃಷ್ಣ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ವಾಸುದೇವಮೂರ್ತಿ ಈ ಸಂದರ್ಭದಲ್ಲಿ ಇದ್ದರು.

