ಮೈಸೂರು: ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ ಭಾನುವಾರ ನಗರದ ನಂಜುಮಳಿಗೆ ವೃತ್ತದಲ್ಲಿ ಕೃಷ್ಣರಾಜ ಯುವಬಳಗ ವತಿಯಿಂದ ಹಿಂದೂ ಕ್ರೈಸ್ತ ಮುಸಲ್ಮಾನ ಭಾಂದವರಿಗೆ ಜನಸ್ನೇಹಿ ಆರಕ್ಷಕ ಸಿಬ್ಬಂದಿ ವರ್ಗದವರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಶಾಂತಿ ಸೌಹಾರ್ದತೆ ಸಹೋರತ್ವದ ಸಂದೇಶ ಸಾರುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿಂದೂ ಕ್ರೈಸ್ತ ಮುಸಲ್ಮಾನ ಭಾಂದವರು ಹಸ್ತಲಾಘವ ಮಾಡಿ ಬಲೂನ್’ಗಳನ್ನು ಗಗನಕ್ಕೆ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೇ ಚಾಲನೆ ನೀಡಿದರು.
ಮಾಜಿ ನಗರಪಾಲಿಕೆ ಸದಸ್ಯ ಜಯಶಂಕರಸ್ವಾಮಿ ರವರು ಸಾರ್ವಜನಿಕರಿಗೆ ಮತ್ತು ಜನಸ್ನೇಹಿ ಆರಕ್ಷಕ ಸಿಬ್ಬಂದಿಗಳಿಗೆ ಹೂಗುಚ್ಚ ನೀಡಿ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಅಭಿಯಾನ ಪ್ರಾರಂಭಿಸಿದರು.
ನಂತರ ಮಾಜಿನಗರ ಪಾಲಿಕೆ ಸದಸ್ಯ ಜಯಶಂಕರಸ್ವಾಮಿ ರವರು ಮಾತನಾಡಿ, ಆಗಸ್ಟ್ ಮೊದಲ ಭಾನುವಾರ ವಿಶ್ವ ಸ್ನೇಹಿತರ ದಿನಾಚರಣೆಯನ್ನಾಗಿ ವಿಶ್ವದೆಲ್ಲಡೆ ಆಚರಿಸಲಾಗುತ್ತದೆ. ಆದರೆ ಕಳೆದ 8 ವರ್ಷಗಳಿಂದ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟವಾಗಿ ಸಮಾಜಕ್ಕೇ ಜಾಗೃತಿಯ ಸಂದೇಶ ನೀಡಲು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಕಾರಣ ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ, ವಿದ್ಯಾಭ್ಯಾಸ, ವೃತ್ತಿಪರ ದಿನಗಳಲ್ಲಿ ಒಬ್ಬೊರಿಗೊಬ್ಬರು ಸ್ಪಂದಿಸಿರುತ್ತೇವೆ. ಒಡನಾಟದಲ್ಲಿರುತ್ತೇವೆ ಉತ್ತಮ ಬಾಂದವ್ಯವಿರುತ್ತದೆ ಎಂದರು.
ಆದರೆ ಕೆಲವು ನಿಷ್ಟುರಕ ಹಾಗೂ ವ್ಯವಹಾರಿಕ ನಡೆನುಡಿಗಳಿಂದ ಬಾಂಧವ್ಯ ಮುರಿದುಹೋಗಿರುತ್ತದೆ. ಹಾಗಾಗಿ ಈ ಆಚರಣೆಯನ್ನು ಪ್ರತಿಯೊಬ್ಬರು ಆಚರಿಸುವ ಮೂಲಕ 100ರಲ್ಲಿ ಕನಿಷ್ಠ 10 ಮಂದಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಶುಭ ಕೋರಲಿ ಮತ್ತೆ ಒಂದಾಗಲಿ ಎಂಬ ಜಾಗೃತಿಯೊಂದಿಗೆ ಅವರ ಗೆಳತನ ಶ್ರಾವಣವಾಗಲಿ ಎಂಬುವುದು ಕೃಷ್ಣರಾಜ ಯುವ ಬಳಗದ ಸದುದ್ದೇಶವಾಗಿದೆ ಎಂದರು.
ನಂತರ ಯುವ ಮುಖಂಡ ನವಿನ್ ಕೆಂಪಿ ಮಾತನಾಡಿ ನಮ್ಮ ಭಾರತ ದೇಶದ ಕೃಷ್ಣ ಸುಧಾಮ, ಅಮರ್- ಅಕ್ಬರ್- ಅಂತೋಣಿ ಕಾಲದ ಇತಿಹಾಸದಿಂದ ಪ್ರಜಾಪ್ರಭುತ್ವದವರೆಗೂ ಸ್ನೇಹ-ಭಾಂದವ್ಯ ಮೌಲ್ಯಯುತವಾಗಿದ್ದು ಯಾವುದೇ ಸಾಧನೆ ಅಥವಾ ಯಶಸ್ವಿಯಾಗ ಬೇಕಾದರೆ ಸ್ನೇಹಿತರ ಸಹಕಾರವೇ ಬಹುಮುಖ್ಯ ಎಂದು ತಿಳಿಸಿದರು.
ಸ್ನೇಹಕ್ಕೆ ಯಾವುದೇ ಜಾತಿ ಧರ್ಮ ವಯಸ್ಸಿನ ಭೇದಭಾವವಿಲ್ಲ, ಕೃಷ್ಣರಾಜ ಯುವಬಳಗ ಸಾರ್ವಜನಿಕವಾಗಿ ಇಂದು ಸ್ನೇಹಿತರ ದಿನಾಚರಣೆ ಆಯೋಜಿಸಿ ಎಲ್ಲರಿಗೂ ಗುಲಾಬಿ ಹೂ ಮತ್ತು ಚಾಕಲೇಟ್ ವಿತರಿಸಿರುವುದು ನಮ್ಮ ಬಾಲ್ಯದ ದಿನ ನೆನಪಿಗೆ ಬರುತ್ತದೆ, ಸಮಾಜದಲ್ಲಿ ಸ್ನೇಹ ಸಂಪಾದನೆಯೇ ಶಾಶ್ವತವಾದ ಸಾಧನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಉದ್ಯಮಿ ಅಪೂರ್ವ ಸುರೇಶ್ , ವಿನಯ್ ಕಣಗಾಲ್ ,ಆದರ್ಶ್ ಬೀಮ್ ,ಪ್ರತಾಪ್ ಜವರಯ್ಯ, ತೀರ್ಥಕುಮಾರ್, ಪೊಲೀಸ್ ಇಲಾಖೆಯ ಜಯಕೃಷ್ಣ , ಪ್ರಸಾದ್ , ಕಲೀಂ ಉಲ್ಲಾ, ಷರೀಫಾ, ಫಯಾಜ್, ಸಾದಿಕ್,ಆಲ್ವಿನ್, ಸ್ಟೀಫನ್ ,ಜೋಸೆಫ್ , ಥಾಮಸ್ ಹಾಗೂ ಇನ್ನಿತರರು ಹಾಜರಿದ್ದರು.

