ಶಾಸಕ ಎಸ್. ಎ. ರಾಮದಾಸ್ ರಿಗೆ ಮಂತ್ರಿಸ್ಥಾನ ನೀಡಲು ಆಗ್ರಹ

ಮೈಸೂರು: ಶಾಸಕ ಎಸ್. ಎ ರಾಮದಾಸ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಿಜೆಪಿ ಹೈಕಮಾಂಡ್ ನ್ನು ಆಗ್ರಹಿಸಿದೆ.

ಮಾತನಾಡಿದ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ ರಘುರಾಂ ವಾಜಪೇಯಿ ಅವರು ಮೈಸೂರು ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಿಜೆಪಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿರುವ ಎಸ. ಎ. ರಾಮದಾಸ್ ಅವರು ಹಳೆಮೈಸೂರು ಭಾಗದ ಹಿರಿಯ ರಾಜಕಾರಣಿ. 4 ಬಾರಿ ಶಾಸಕರಾಗಿ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವಾರು ಜನಪರ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿಗೊಳಿಸಿದ್ದಾರೆಂದರು.

ಉತ್ತಮ ಆಡಳಿತ ಅನುಭವ ಮತ್ತು ಜಿಲ್ಲೆಯ ಬೆಳವಣಿಗೆಯ ಬಗ್ಗೆ ಚಿಂತನೆಯಿರುವ ಎಸ್.ಎ ರಾಮದಾಸ್ ಅವರಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ನೀಡಬೇಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಲ್ಲಿ ಮತ್ತು ಬಿಜೆಪಿ ಹೈಕಮಾಂಡ್ ಅವರಲ್ಲಿ ಮೈಸೂರು ಬ್ರಾಹ್ಮಣ ಸಂಘದಿಂದ ಮನವಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಕುಟುಂಬಗಳಿಗೆ ಸರ್ಕಾರಿ ಸವಲತ್ತು ಮತ್ತು ಮೂಲಭೂತ ಸೌಲಭ್ಯ ಪಡೆಯಲು 10% ಮೀಸಲಾತಿಯನ್ನು ಕಲ್ಪಿಸಿದೆ. ಪದವೀಧರ ವಿದ್ಯಾಭ್ಯಾಸ ಮಾಡುವ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಡಕೊಳ ಜಗದೀಶ್, ವಿಪ್ರ ಫೆÇೀರಂ ಸಂಚಾಲಕ ಭಾಷ್ಯಂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.