ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ರಾಜ್ಯದ ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಿ ಆ ಕಾಲೇಜುಗಳ ಮಾನ್ಯತೆಯನ್ನು ವಾಪಸ್ ಪಡೆದಿದೆ.
ಈ ಕಾಲೇಜುಗಳಿಗೆ ಯಾವ ವಿದ್ಯಾರ್ಥಿಯೂ ದಾಖಲಾಗಬಾರದು ಹಾಗೂ ಈಗಾಗಲೇ ವಿವಿಧ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ಹೊಂದಿರುವ ಇತರೆ ಕಾಲೇಜುಗಳಲ್ಲಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕ ಸೂಚನೆ ಹೊರಡಿಸಲಾಗುವುದು ಎಂದು ವಿವಿಯ ಪ್ರಕಟಣೆ ತಿಳಿಸಿದೆ.
ಒಂದು ವೇಳೆ ಯಾರೇ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಕಡೆಗಣಿಸಿ ಕೆಳಕಂಡ ಕಾಲೇಜುಗಳಲ್ಲಿ ದಾಖಲಾದರೆ ತಾನು ಜವಾಬ್ದಾರಿಯಲ್ಲ ಎಂದು ವಿವಿ ತಿಳಿಸಿದೆಯಾದರೂ, ಮಾನ್ಯತೆ ವಾಪಸ್ ಪಡೆದ ಬಗ್ಗೆ ವಿವಿ ಯಾವುದೇ ಕಾರಣ ನೀಡಿಲ್ಲ.
ಮಾನ್ಯತೆ ಕಳೆದುಕೊಂಡ ಕಾಲೇಜುಗಳು
1.ಆಲ್ಫಾ ಕಾಲೇಜ್ ಆಫ್ ಎಂಜಿನಿಯರಿಂಗ್ -ಬೆಂಗಳೂರು
2.ಶೇಖ್ ಕಾಲೇಜ್ ಆಫ್ ಎಂಜಿನಿರಿಂಗ್- ಬೆಳಗಾವಿ
3.ಇಸ್ಲಾಮಿಯಾ ಇನಸಿಟ್ಯೂಟ್ ಆಫ್ ಟೆಕ್ನಾಲಜಿ-ಬೆಂಗಳೂರು
4.ಏಕಲವ್ಯ ಇನಸಿಟ್ಯೂಟ್ ಆಫ್ ಟೆಕ್ನಾಲಜಿ-ಚಾಮರಾಜನಗರ
5.ಶ್ರೀ ವಿನಾಯಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ-ಕೆಜಿಎಫ್
6.ಇಟಿಎಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್-ಬೆಂಗಳೂರು

