ಚಾಮರಾಜನಗರ: ಸಮಾಜದಲ್ಲಿ ರೇಪ್ ಗಳು ನಡೆಯುತ್ತವೆ. ಏನು ಮಾಡಲಾಗಲ್ಲ ಎಂದು ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಶುಕ್ರವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೈಸೂರಿನನಲ್ಲಿ ನೆಡದಿರುವ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸದಂತೆ ಪ್ರತಿಕ್ರಿಯಿಸಿದ ಸಚಿವ ಕತ್ತಿ ಅವರು, ಇವೆಲ್ಲವೂ ಸಮಾಜದಲ್ಲಿ ನಡೆಯುವುಗಳೇ, ನಡೆಯಬಾರದು ಆದರೂ ನಡೆಯುತ್ತದೆ. ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದು ಹೆಚ್ಚು ಇದರ ಬಗ್ಗೆ ಮಾತನಾಡಲು ತಾನು ಗೃಹ ಸಚಿವನಲ್ಲ ಎಂದರು.
ಉಮೇಶ್ ಕತ್ತಿ ಅವರು ನಿನ್ನೆ ಬಂಡೀಪುರದಲ್ಲಿ ಒಬ್ಬರಿಗೆ 5 ಕೆಜಿ ಅಕ್ಕಿ ಸಾಕು ಎಂದು ಹೇಳಿಕೆ ಕೊಟ್ಟು ಟೀಕೆಗೆ ಒಳಗಾಗಿದ್ದರೇ ಇಂದು ಅತ್ಯಾಚಾರದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

