ಗ್ಯಾಂಗ್ ರೇಪ್ ಪ್ರಕರಣ ಶೀಘ್ರದಲ್ಲೇ ಬಗೆಹರಿಯಲಿದೆ -ಗೃಹ ಸಚಿವ ಅರಗ ಜ್ಞಾನೇಂದ್ರ

ಮೈಸೂರು: ಮೈಸೂರಿನಲ್ಲಿ ನಡೆದ ಎರಡು ಘಟನೆ ದುರದೃಷ್ಟಕರ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಗೃಹ ಸಚಿವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮೈಸೂರಲ್ಲಿ ನೆಡದಿರುವ ಗ್ಯಾಂಗ್ ರೇಪ್ ವಿಚಾರ ಶೀಘ್ರದಲ್ಲೇ ಬಗೆಹರಿಯುತ್ತದೆ ಎಂದು ಅವರು ತಿಳಿಸಿದರು.

ಗುಂಡೇಟು ಪ್ರಕರಣದಲ್ಲಿ 6 ಮಂದಿ ಬಂಧನ
ಮೈಸೂರಲ್ಲಿ ಇತ್ತೀಚೆಗೆ ಚಿನ್ನಾಭರಣ ಅಂಗಡಿ ದರೋಡೆ ಮತ್ತು ಗುಂಡೇಟು ಪ್ರಕರಣ ನಡೆದಿತ್ತು.

ಈ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಗೃಹ ಸಚಿವರು ನೆಡಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೈಸೂರು ಪೆÇೀಲಿಸ್ ಆಯುಕ್ತರು ಐದು ತಂಡ ರಚಿಸಿ ದೇಶದ ಬೇರೆ ಬೇರೆ ಭಾಗಕ್ಕೆ ಕಳುಹಿಸಿದ್ದರು. ನಾಲ್ಕು ದಿನಗಳ ನಂತರದಲ್ಲಿ ಒಳ್ಳೆಯ ಸುದ್ದಿ ಕೊಡುತ್ತಿದ್ದೇವೆ. ಆರು ಮಂದಿಯನ್ನು ಬಂಧಿಸಿದ್ದೇವೆ. ಪ್ಲ್ಯಾನ್ ಮಾಡಿದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದರು.

ಒಬ್ಬರು ಮೈಸೂರಿನವರು, ಮತ್ತೊಬ್ಬ ರಾಜಸ್ಥಾನದವವು ಎಂದವರು ತಿಳಿಸಿದರು.

ದರೋಡೆ, ಕೊಲೆ ಮಾಡಿದವರ ಪೈಕಿ ಇಬ್ಬರನ್ನು ಪಶ್ಚಿಮ ಬಂಗಾಳ, ಮುಂಬೈ ಮತ್ತು ಜಮ್ಮು ಕಾಶ್ಮೀರದಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂದ ಇನ್ನಿಬ್ಬರ ಬಂಧನ ಆಗಬೇಕಿದೆ ಎಂದು ಅವರು ಹೇಳಿದರು.

ಗ್ಯಾಂಗ್ ರೇಪ್ ಪ್ರಕರಣ ಕುರಿತು ಐಜಿಪಿ ಪ್ರವೀಣ್ ಸೂದ್ ಮಾತನಾಡಿ, ಆ ಹುಡುಗಿ ಹೇಳಲಿ ಬಿಡಲಿ, ನಮಗೆ ಯಾವುದೇ ಅನುಮಾನ ಇಲ್ಲ. ಅಲ್ಲಿ ಏನೇನೂ ನಡೆದಿದೆ ಅಂತ ಗೊತ್ತಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಸದ್ಯ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಎಂದರು.

ಮಾಹಿತಿ ಸೋರಿಕೆಯಾದರೆ ಆರೋಪಿಗಳು ಎಚ್ಚೆತ್ತುಕೊಳ್ಳಬಹುದು. ಆರೋಪಿಗಳ ಬಂಧನ ತಡವಾಗಬಹುದು ಎಂದು ತಿಳಿಸಿದರು.