ವೀರ ಶೈವ ಲಿಂಗಾಯತ ಧರ್ಮ ಒಂದೇ ಧರ್ಮವಾಗಿ ಉಳಿಬೇಕು -ಸಚಿವ ಮುರುಗೇಶ್ ನಿರಾಣಿ

ದಾವಣಗೆರೆ:ವೀರ ಶೈವ ಲಿಂಗಾಯತ ಧರ್ಮ ಒಂದೇ ಧರ್ಮವಾಗಿ ಉಳಿಬೇಕು ವಿನಾಃ ವೀರಶೈವರು ಬೇರೆ ಲಿಂಗಾಯತರು ಬೇರೆ ಆಗ್ಬಾರ್ದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

 ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೂಂದಿಗೆ ಅವರು ಮಾತನಾಡಿದರು.

ಸಮಸ್ತ ಲಿಂಗಾಯತ ಬೇಡಿಕೆ ಇದ್ರೇ ತಮ್ಮದೆಯಾದ ಮುಖ್ಯಮಂತ್ರಿಗಳಿದ್ದಾರೆ ಹಾಗು ಸಾಕಷ್ಟು ಸಚಿವರಿದ್ದಾರೆ ಸಭೆ ಕರೆದು ಕೂತು ಚರ್ಚೆ ನಡೆಸಿ ಸಾಧಕಬಾಧಕಗಳನ್ನು ಚರ್ಚಿಸಿ  ವಿಚಾರ‌ ಮಾಡಿ ಇದಕ್ಕೆ‌ ಒಂದು ನಿಯಮ ಇದೆ ಅದರ ಮೂಲಕ ಬಗೆಹರಿಸಕೊಳ್ಳಬೇಕಾಗಿದೆ ಎಂದರು.

ಪ್ರತ್ಯಕ ಲಿಂಗಾಯ ಧರ್ಮದ ಕಮೀಟಿಯ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಈಗಾಗಾಲೇ ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದರು.

ಇನ್ನು ನಾನು ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡುವುದಿಲ್ಲ ಬದಲಾಗಿ ಸಣ್ಣ ಸಣ್ಣ ಸಮಾಜದರನ್ನು ಒಗ್ಗೂಡಿಸಿ ಅವರ ಧ್ವನಿಯಾಗಬೇಕಾಗಿದೆ ಎಂದರು.

ಪಂಚಮಸಾಲಿ ಮತ್ತೊಂದು ಪ್ರತ್ಯೇಕ ಪೀಠ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು ಇದ್ಯಾವು ನನ್ನ ಗಮನಕ್ಕೆ ಬಂದಿಲ್ಲ, ಅದರ ಬಗ್ಗೆ ಎಲ್ಲರ ಜೊತೆ ಮಾತನಾಡ್ತೀನಿ ಎಂದರು.