ಕಾಬೂಲ್: ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ತಾಲಿಬಾನ್ ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳ ಆಂತರಿಕ ವಿಚಾರವಾದ ಕಾಶ್ಮೀರದ ವಿಚಾರವಾಗಿ ತಾನು ತಲೆದೋರಿಸುವುದಿಲ್ಲ ಎಂದು ತಾಲಿಬಾನ್ ಈ ಹಿಂದೆ ಹೇಳಿತ್ತು.
ಅದು ಆ ದೇಶಗಳ ಆಂತರಿಕ ಸಮಸ್ಯೆಯಾಗಿದ್ದು, ಅವುಗಳೇ ಪರಿಹರಿಸಿಕೊಳ್ಳಬೇಕು. ತಾನು ಇದರಲ್ಲೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದ ತಾಲಿಬಾನ್ ಇದೀಗ ಉಲ್ಟಾ ಹೊಡೆದಿದೆ.
ನಾನು ಮುಸ್ಲಿಮರಾಗಿರುವ ಕಾರಣ ಕಾಶ್ಮೀರದ, ಭಾರತದ ಹಾಗೂ ವಿಶ್ವದ ಯಾವುದೇ ದೇಶದ ಮುಸ್ಲಿಮರ ಪರವಾಗಿ ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ ಹಾಗೂ ಮುಸ್ಲಿಮರು ಎಲ್ಲರೂ ನಿಮ್ಮ ಜನರು ಎಂದು ಹೇಳುತ್ತೇವೆ. ಎಲ್ಲಾ ದೇಶಗಳಲ್ಲಿಯೂ ಮುಸ್ಲಿಮರಿಗೆ ಸಮಾನವಾದ ಹಕ್ಕು ಆ ದೇಶದ ಕಾನೂನಿನ ಅಡಿಯಲ್ಲಿ ಸಿಗಬೇಕು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಹೇಳಿದ್ದಾರೆ.

