ಗಣೇಶ ಹಬ್ಬ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಹೆಗಲಿಗೆ

ಬೆಂಗಳೂರು: ಗಣೇಶ ಹಬ್ಬದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ.

ಶನಿವಾರ ವಿಧಾನಸೌಧದಲ್ಲಿ ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸದಸ್ಯರು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಿರುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞರೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಅದರೊಂದಿಗೆ ಹಲವು ಮಹತ್ವದ ತೀರ್ಮಾನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಂಪುಟ ಸಭೆಯ ತೀರ್ಮಾನಗಳು ಹೀಗಿವೆ
ಆನ್‍ಲೈನ್ ಜೂಜು ನಿಷೇಧಕ್ಕೆ ಸಂಪುಟ ಒಪ್ಪಿಗೆ. ಬರುವ ಅಧಿವೇಶನದಲ್ಲಿ ಈ ಕಾಯ್ದೆ ಅಂಗೀಕಾರ. ಆ ಮೂಲಕ ಎಲ್ಲ ರೀತೀಯ ಆನ್‍ಲೈನ್ ಜೂಜು ರಾಜ್ಯದಲ್ಲಿ ನಿಷೇಧವಾಗಲಿದೆ.

ರಾಜ್ಯದಲ್ಲಿ ಕೊರೊನಾ ಮೂರನೇ ಆತಂಕ ಹಿನ್ನೆಲೆ ಅದರ ನಿರ್ವಹಣಗೆ 17.72 ಕೋಟಿ ರೂ. ಮಂಜೂರು ಮಾಡಲಾಯಿತು.

ಮೈಸೂರು ಅರಮನೆಯಲ್ಲಿ ಫ್ಲಾಶ್ ಹಾಕದೆಯೇ ಪೆÇೀಟೊ ತೆರೆಯಲು ಅವಕಾಶವಿದೆ. ಮೈಸೂರು ಅರಮನೆಯಲ್ಲಿ ಫ್ಲ್ಯಾಶ್ ಇಲ್ಲದೆ ಫೆÇೀಟೊ ಶೂಟ್ ಮಾಡ ಬಹುದು ಎಂದು ಸಂಪುಟ ಒಪ್ಪಿಗೆ ಕೊಟ್ಟಿದೆ.

ರಾಜ್ಯದಲ್ಲಿ ಇನ್ವೆಸ್ಟ್‍ಮೆಂಟ್ ಕನ್ಸಲ್ಟಂಟ್ ಇನ್ನೊಂದು ವರ್ಷ ಮುಂದುವರೆಸಲು ತೀರ್ಮಾನ. ಅದಕ್ಕೆ ವರ್ಷಕ್ಕೆ 12 ಕೋಟಿ ರೂ. ಕೊಡಲು ಒಪ್ಪಿಗೆ ಕೋವಿಡ್ ಸಂಕಷ್ಟದಿಂದ ಆ ಸಂಸ್ಥೆಯಿಂದ ಲಾಭವಾಗಿರಲಿಲ್ಲ. ಆದರೆ ಇನ್ವೆಸ್ಟ್‍ಮೆಂಟ್ ಕಾರ್ಯಕ್ರಮ ಮಾಡಲು ಈ ವರ್ಷ ಸಂಸ್ಥೆ ಮುಂದುವರೆಸಲು ತೀರ್ಮಾನಿಸÀಲಾಗಿದೆ.

ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸ್ಥಾಪನೆಗೆ ಸಂಪುಟದ ನಿರ್ಧಾರ. ಹಿಂದೆ ಜಕ್ಕೂರಿನಲ್ಲಿ ರಾಜೀವ್ ಸೊಸೈಟಿಗೆ ಅನುಮತಿ ಕೊಡಲಾಗಿತ್ತು. ಆದರೆ ಇಲ್ಲಿಯವರೆಗೆ ಸೊಸೈಟಿ ಕಾರ್ಯ ಆರಂಭಿಸಿಲ್ಲ. ಹಾಗಾಗಿ ಬೇರೆಯವರಿಗೆ ಪಿಪಿಎ ಅಡಿಯಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಸಮ್ಮತಿಸಲಾಗಿದೆ.

ಕೃಷಿ ಇಲಾಖೆ ಅಡಿಯಲ್ಲಿ ಬೀಜ ನಿಗಮ ಸಾಲ ಪಡೆಯಲು ಶೂರಿಟಿಯನ್ನು 10ರಿಂದ 20 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಪುಟ ಒಪ್ಪಿದೆ. ಇನ್ಮುಂದೆ ಬೀಜ ನಿಗಮ 20 ಕೋಟಿ ರೂ. ಸಾಲ ಪಡೆಯಲು ಅನುಕೂಲವಾಗಲಿದೆ.

ಶಿಕ್ಷಕರ ವರ್ಗಾವಣೆಗೆ ವಿಧೇಯಕ ತಂದಿದ್ದೆವು, ಈ ವಿಧೇಯಕಕ್ಕೆ ತಿದ್ದುಪಡಿ ಮಾಡಿ ಜಾರಿಗೆ ತರಲು ಒಪ್ಪಿಗೆ ನೀಡಲಾಗಿದೆ.

ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಕೊಡಲು ತೀರ್ಮಾನ.

ಐಟಿಐ ತರಬೇತಿ ಪಡೆಯುವ 13,061 ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಯೋಜನೆ, ಅದಕ್ಕಾಗಿ 18 ಕೋಟಿ ರೂ. ಅನುದಾನ ಬಿಡುಗಡೆ.

ಸರಕು ಸೇವೆ ತಿದ್ದುಪಡಿ ವಿಧೇಯಕಕ್ಕೆ ಅನುಮತಿ ಕೊಡಲಾಗಿದೆ.

ಪೆÇಲೀಸ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ ಮಾಡಲಾಯಿತು.