ದೇವಾಲಯಗಳ ಉಳಿವಿಗೆ ಹೊಸ ಬಿಲ್ ಮಂಡಿಸುತ್ತೇನೆ -ಶಾಸಕ ಎಸ್.ಎ.ರಾಮದಾಸ್

ಮೈಸೂರು: ರಾಜ್ಯದಲ್ಲಿ ದೇವಾಲಯಗಳ ಉಳಿವಿಗೆ, ಸಂರಕ್ಷಣೆಗೆ ವಿಧಾನಸಭೆಯಲ್ಲಿ ಹೊಸ ಬಿಲ್ ಮಂಡಿಸುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸೆ. 23ರಂದು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಸಿಕ್ಕಿದ್ದು, ಅಂದು ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ಅಧಿಕೃತಗೊಳಿಸಲು ಖಾಸಗಿ ಬಿಲ್ ಮಂಡಿಸುತ್ತೇನೆ. ಬಿಲ್ ಮಂಡನೆಗೆ ಸಿದ್ಧತೆ ನಡೆಸಿಕೊಂಡಿದ್ದೇನೆ ಎಂದವರು ಹೇಳಿದರು.

ರಾಜ್ಯದಲ್ಲಿನ 2814 ಅನಧಿಕೃತ ದೇವಾಲಯಗಳನ್ನ ಅಧಿಕೃತಗೊಳಿಸಲು ಕ್ರಮ ಹಾಗೂ ಅನಧಿಕೃತ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆ ಕಾಯ್ದೆ 2021 ಕಾಯ್ದೆ ಪಾಸ್ ಮಾಡಲು ವಿಪಕ್ಷಗಳ ಬಳಿಯೂ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಅವರ ಬಳಿ ಮಾತಾಡುತ್ತೇನೆ ಎಂದು ಶಾಸಕ ರಾಮದಾಸ್ ತಿಳಿಸಿದರು.

ಈ ಬಿಲ್ ನಲ್ಲಿ ಭವಿಷ್ಯದಲ್ಲಿ ಅನಧಿಕೃತ ದೇವಸ್ಥಾನ ನಿರ್ಮಿಸಿಸದರೆ ಕಾನೂನು ಕ್ರಮಕ್ಕೂ ಅವಕಾಶ ಇದೆ. ಯಾವುದೇ ಅನಧಿಕೃತ ದೇವಾಲಯ ನಿರ್ಮಾಣವಾಗದಂತೆ ತಡೆಯಲು ಕಾಯ್ದೆ ಇದೆ. ಇದರಿಂದ ಪ್ರಾಧಿಕಾರ ಅನ್ನೋದು ಬರಲ್ಲ. ಒಂದು ಸಕ್ಷಮದ ರೀತಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಬರಲಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಲ್ಲ. ಇದನ್ನ ಸಿಎಂ ಅವರ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿದರು.

11 ವರ್ಷದಿಂದ ಈ ಬಗ್ಗೆ ಅಧಿಕಾರಿಗಳು ಸಹ ಕ್ರಮ ಕೈಗೊಂಡಿಲ್ಲ. ನಾನು ಜಿಲ್ಲಾ ಮಂತ್ರಿ ಆಗಿದ್ದ ವೇಳೆಯು ಇದನ್ನ ಅಧಿಕಾರಿಗಳಿಗೆ ಫೈಲ್ ನೀಡಿದ್ದೆ. ಅಂದು ಅಧಿಕಾರಿಗಳು ಫೈಲ್ ತಮ್ಮ ಕಚೇರಿಯಲ್ಲಿ ಇಟ್ಟಿಕೊಂಡಿದ್ದರು. ಆದರೆ ಇಂದು ಖುದ್ದು ನಾನೇ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಶಾಸಕ ರಾಮದಾಸ್ ತಿಳಿಸಿದರು.