ದಾವಣಗೆರೆ: ತಮ್ಮ ಸೋಲನ್ನು ಡಿ.ಕೆ. ಶಿವಕುಮಾರ್ ಮೊದಲೇ ಒಪ್ಪಿಕೊಂಡಿದ್ದಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ದಾವಣಗೆರೆಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎರಡೂ ಉಪಚುನಾವಣೆ ಗೆಲ್ಲುತ್ತೇವೆ. ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದ್ದು, ಅದೇ ಕಾರಣಕ್ಕೆ ಉಪಚುನಾವಣೆಗಳನ್ನು ದಿಕ್ಸೂಚಿ ಎಂದು ಒಪ್ಪಿಕೊಂಡಿಲ್ಲ ಎಂದರು.
ತಮ್ಮ ಸೋಲನ್ನು ಮೊದಲೇ ಒಪ್ಪಿಕೊಂಡ ಡಿ.ಕೆ. ಶಿವಕುಮಾರ್, ಇದನ್ನು ದಿಕ್ಸೂಚಿ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಡಿಕೆಶಿಗೆ ಟಾಂಗ್ ನೀಡಿದರು.
ಕಲ್ಲಿದ್ದಿಲ ಕೊರತೆ ಕೇವಲ ಊಹಪೆÇೀಹ
ಕಲ್ಲಿದ್ದಲಿನ ಕೊರತೆ ಕೇವಲ ಊಹಪೆÇೀಹ. ಅದು ಸತ್ಯಕ್ಕೆ ದೂರವಾಗಿದ್ದು, ರಾಯಚೂರು, ಬಳ್ಳಾರಿ, ಘಟಕಗಳಿಗೆ ಯಾವುದೇ ತೊಂದರೆ ಇಲ್ಲ, ಕೇಂದ್ರ ಸರ್ಕಾರ ನಿತ್ಯ 8 ರೇಕ್ ಕಲ್ಲಿದ್ದಲು ಕಳುಹಿಸುತ್ತಿತ್ತು. ಹೆಚ್ಚುವರಿ ಎರಡು ರೇಕ್‍ಗೆ ಬೇಡಿಕೆ ಇಟ್ಟಿದ್ದೇವು. ಕೇಂದ್ರ ಅದಕ್ಕೆ ಸ್ಪಂದಿಸುತ್ತಿದೆ, ನಮ್ಮಲ್ಲಿ ಕಲ್ಲಿದ್ದಿಲಿನ ಕೊರತೆ ಇಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದರು.

