ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸಿವುದಾಗಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯನವರು ಮಾತನಾಡಿದರು.
ಸುಧಾಕರ್ ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಅದು ಅವರನ್ನು ಹಾಗೆ ಮಾತನಾಡಿಸುತ್ತಿದೆ. ಇವರು ಕಾಂಗ್ರೆಸ್ ಪಕ್ಷದಿಂದ ಗೆದಿದ್ದರು. ಆಪರೇಷನ್ ಕಮಲದ ಮೂಲಕ ಹಣ ತೆಗೆದುಕೊಂಡು ಬಿಜೆಪಿಗೆ ಹೋಗಿ ಮಂತ್ರಿಗಳಾಗಿದ್ದಾರೆಂದು ಕುಟುಕಿದರು.
2023ಕ್ಕೆ ಇವರೆಲ್ಲರೂ ಮನೆಗೆ ಹೋಗುತ್ತಾರೆ. ಯಾರು ಜೈಲಿಗೆ ಹೋಗುತ್ತಾರೆ? ಯಾರು ಹೊರಗೆ ಇರುತ್ತಾರೆ? ಎನ್ನುವುದು ಆಮೇಲೆ ಗೊತ್ತಾಗುತ್ತದೆ. ಆತನಿಗೆ ಕಾನೂನಿನ ಅರಿವಿಲ್ಲ. ಆತನೊಬ್ಬ ಮೂರ್ಖ ಎಂದು ಸಿದ್ದರಾಮಯ್ಯ ಟೀಕಿಸಿದರು.

