ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಗುರುವಾರ ನಟ ಶಾರೂಖ್ ಖಾನ್ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾರೂಖ್ ಖಾನ್ ಅಲ್ಲದೇ ನಟಿ ಅನನ್ಯ ಪಾಂಡೆ ಮನೆ ಮೇಲೂ ಎನ್‍ಸಿಬಿ ದಾಳಿ ನಡೆಸಿದೆ.
ಡ್ರಗ್ಸ್ ಕೇಸ್ ನಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ರನ್ನು ಗುರುವಾರ ಶಾರೂಖ್ ಖಾನ್ ಭೇಟಿಯಾಗಿದ್ದರು.
ಶಾರೂಖ್ ಖಾನ್ ಮಗನನ್ನು ಅರ್ಥರ್ ರೋಡ್ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಎನ್‍ಸಿಬಿ ಈ ದಾಳಿ ನಡೆಸಿದೆ.
ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣ ಸಂಬಂಧದಲ್ಲಿ ಆರ್ಯನ್ ಖಾನ್ ಅವರನ್ನು ಎನ್‍ಸಿಬಿ ಬಂಧಿಸಿತ್ತು.
ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಳಿಸಿತ್ತು.

