ಬೆಂಗಳೂರು: ಸಿಂಧಗಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಭೂಸನೂರು ವಿಜಯಿ ಆಗಿದ್ದಾರೆ.
ಬಿಜೆಪಿಯ ರಮೇಶ್ ಭೂಸನೂರು ತನ್ನ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗಿಂತ 31088 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಬಿಜೆಪಿಯ ರಮೇಶ್ ಭೂಸನೂರು 93,380 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,292 ಮತ ಪಡೆದರೆ, ಜೆಡಿಎಸ್‍ನ ನಾಜಿಯಾ ಅಂಗಡಿ 4321 ಮತ ಮಡೆದು ಸೋಲುಂಡಿದ್ದಾರೆ.

