ಪಠಾಣ್ ಕೋಟ್ ಸೇನಾ ಗೇಟ್ ಬಳಿ ಗ್ರೆನೇಡ್ ಸ್ಫೋಟ: ಹೈ ಅಲರ್ಟ್ ಘೋಷಣೆ

ಪಂಜಾಬ್: ಪಠಾಣ್‍ಕೋಟ್‍ನ ಧೀರಪುಲ್ ಬಳಿ ಭಾರತೀಯ ಸೇನೆಯ ತ್ರಿವೇಣಿ ಗೇಟ್‍ನಲ್ಲಿ ಸೋಮವಾರ ಮುಂಜಾನೆ ಗ್ರೆನೇಡ್ ಸ್ಫೋಟ ಸಂಭವಿಸಿದೆ.

ಸ್ಫೋಟ ಸಂಭವಿಸಿರುವ ಸ್ಥಳದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗೇಟ್ ಬಳಿ ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

 ಪೊಲೀಸರು ಸ್ಥಳಕ್ಕೆ ಧಾವಿಸಿ,ಘಟನೆ ಸಂಭವಿಸಿದ  ಸ್ಥಳದಲ್ಲಿ ಸುತ್ತ, ಮುತ್ತ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

 ಪಠಾಣ್‍ಕೋಟ್‍ನ ಎಲ್ಲಾ ಪೊಲೀಸ್ ಚೆಕ್‍ಪೊಸ್ಟ್  ಗಳಲ್ಲಿ  ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಘಟನೆಯಲ್ಲಿ ಯಾವುದೇ ಸಾವು,ನೋವು ವರದಿಯಾಗಿಲ್ಲ. 

 ಸ್ಥಳದಲ್ಲಿದ್ದ ಗ್ರೆನೇಡ್‍ನ ಭಾಗಗಳನ್ನುಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.