ನವದೆಹಲಿ: ಭಾರತೀಯ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಐಸಿಸ್ ಉಗ್ರರು ಕೊಲೆ ಬೆದರಿಕೆ ಹಾಕಿದ್ದಾರೆ.
ಒಂದೆಡೆ ಭಾರತೀಯ ಸೇನೆಯು ಐಸಿಸ್ ಉಗ್ರರನ್ನು ಸದೆಬಡಿಯುವ ಕಾರ್ಯ ಮುಂದುವರಿಸಿದ್ದರೇ, ಮತ್ತೊಂದೆಡೆ ಐಸಿಸ್ ಉಗ್ರರಿಂದ ಜೀವ ಬೆದರಿಕೆ ಕೂಡಾ ಮುಂದುವರೆದಿದೆ.
ಇದೀಗ ಭಾರತೀಯ ಕ್ರಿಕೆಟ್ ದಿಗ್ಗಜ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸ್ವತಹ ಗೌತಮ್ ಗಂಭೀರ್ ಅವರೇ ಮಾಹಿತಿ ನೀಡಿ, ಐಸಿಸ್ ಉಗ್ರರು ಕಾಶ್ಮೀರದಿಂದ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇದರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಆತಂಕ ಮೂಡಿದೆ.
ಭಾರತೀಯ ಸೇನೆ ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಹೊಡೆದುರುಳಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದೆ. ಉಗ್ರರ ಅಡಗುತಾಣಗಳ ಮೇಲೆ ದಾಳಿ ಮುಂದುವರಿದಿದೆ.
ಇದಕ್ಕೆಲ್ಲ ಕ್ಯಾರೆ ಎನ್ನದೆ ಐಸಿಸ್ ಉಗ್ರರು ಖ್ಯಾತ ವ್ಯಕ್ತಿ ಗಳನ್ನು ಗುರಿಯಾಗಿಸಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದಾರೆ.

