ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ

ಬೆಂಗಳೂರು: ಸಿಹಿ ನಿದ್ದೆಯಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಬುಧವಾರ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿ ನಿದ್ದೆಗೆಡಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕಾರ್ಯವನ್ನು ಮುಂದುವರಿಸಿರುವ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ 60 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯುಳ್ಳ ತಂಡ ಬುಧವಾರ ಬೆಳಿಗ್ಗೆಯೇ ದಾಳಿ ನಡೆಸಿತು.

ಕೆ.ಎಸ್.ಲಿಂಗೇಗೌಡ, ಕಾರ್ಯನಿರ್ವಹಕ ಇಂಜಿನಿಯರ್ ಸ್ಮಾರ್ಟ್ ಸಿಟಿ ಮಂಗಳೂರು, ಶ್ರೀನಿವಾಸ್.ಕೆ. ಕಾರ್ಯನಿರ್ವಹಕ ಇಂಜಿನಿಯರ್. ಎಚ್ ಎಲ್ ಬಿ.ಸಿ, ಮಂಡ್ಯ, ಲಕ್ಷ್ಮೀನರಸಿಂಹಯ್ಯ ಕಂದಾಯ ನಿರೀಕ್ಷಕರು. ದೊಡ್ಡಬಳ್ಳಾಪುರ, ವಾಸುದೇವ್. ಮಾಜಿ ಪ್ರಾಜೆಕ್ಟ್ ಮ್ಯಾನೇಜರ್.ನಿರ್ಮಿತಿ ಕೇಂದ್ರ ಬೆಂಗಳೂರು, ಬಿ.ಕೃಷ್ಣಾರೆಡ್ಡಿ.ಜನರಲ್ ಮ್ಯಾನೇಜರ್.ನಂದಿನಿ ಡೈರಿ ಬೆಂಗಳೂರು, ಟಿ.ಎಸ್. ರುದ್ರೇಶಪ್ಪ. ಜಂಟಿ ನಿರ್ದೇಶಕ, ಕೃಷಿ ಇಲಾಖೆ ಗದಗ, ಎ.ಕೆ. ಮಾಸ್ತಿ ಸಹಕಾರಿ ಅಭಿವೃದ್ಧಿ ಅಧಿಕಾರಿ. ಸವದತ್ತಿ(ನಿಯೋಜನೆ)ಬಿಸಿಲಹೊಂಗಲ, ಸದಾಶಿವ ಮರಲಿಂಗಣ್ಣನವರ್,ಹಿರಿಯ ಮೋಟಾರು ನಿರೀಕ್ಷಕರು.ಗೋಕಾಕ, ನಾಥಾಜಿ ಹೀರಾಜಿ ಪಾಟೀಲ್.ಗ್ರೂಪ್ ಸಿ.ಹೆಸ್ಕಾಂ ಬೆಳಗಾವಿ, ಕೆ.ಎಸ್. ಶಿವಾನಂದ್ ನಿವೃತ್ತ ಸಬ್ ರಿಜಿಸ್ಟ್ರಾರ್. ಬಳ್ಳಾರಿ, ರಾಜಶೇಖರ್.ಫಿಸಿಯೋಥೆರಪಿಸ್ಟ್.ಸರ್ಕಾರಿ ಆಸ್ಪತ್ರೆ.ಯಲಹಂಕ, ಬೆಂಗಳೂರು, ಮಾಯಣ್ಣ.ಎಂ.ಎಫ್ ಡಿ ಸಿ, ಬಿಬಿಎಂಪಿ ಪ್ರಮುಖ ರೋಫ್ ಗಳು ಮತ್ತು ಮೂಲಸೌಕರ್ಯ. ಬೆಂಗಳೂರು, ಎಲ್.ಸಿ.ನಾಗರಾಜ್, ಆಡಳಿತಾಧಿಕಾರಿ.ಸಕಾಲ. ಬೆಂಗಳೂರು, ಜಿ.ವಿ.ಗಿರಿ.ಗ್ರೂಪ್ ಡಿ.ಬಿಬಿಎಂಪಿ ಯಶವಂತಪುರ.ಬೆಂಗಳೂರು, ಎಸ್.ಎಂ.ಬಿರಾದಾರ್.ಜೂನಿಯರ್ ಇಂಜಿನಿಯರ್.ಪಿಡಬ್ಲ್ಯೂಡಿ ಇಲಾಖೆ ,ಜೇವರ್ಗಿ.

ಈ ಎಲ್ಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಶೋಧ ಕಾರ್ಯದಲ್ಲಿ ತೊಡಗಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.