ಭಾರೀ ಮಳೆಯಿಂದ ಕಂಗೆಟ್ಟ ಬೆಂಗಳೂರಿನ ಜನ: ಕಷ್ಟ ಆಲಿಸಿದ ಬೊಮ್ಮಾಯಿ

ಬೆಂಗಳೂರು: ಶನಿವಾರ ಮತ್ತು ಭಾನುವಾರ ಸುರಿದ ಭಾರೀ ಮಳೆಯಿಂದ ಜಲಾವೃತಗೊಂಡಿರುವ ಬೆಂಗಳೂರಿನ ಯಲಹಂಕದ ಕೇಂದ್ರಿಯ ವಿಹಾರ್ ಅಪಾರ್ಟ್ ಮೆಂಟ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಅಪಾರ್ಟ್ ಮೆಂಟ್ ಜನರ ಪರಿಸ್ಥಿತಿಯನ್ನು ಅರಿತು ಮತ್ತು ಅವರ ಕಷ್ಟಗಳನ್ನು ಸಿಎಂ ಆಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಳೆಯಿಂದ ನೆರೆ ಉಂಟಾಗಿರುವ ಜಾಗಗಳಿಗೆ ನಾನೇ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಯಲಹಂಕದ ಕೇಂದ್ರಿಯ ವಿಹಾರ್ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆ ನೀರು ನಿಂತು ಜನರಿಗೆ ತುಂಬ ತೊಂದರೆ ಆಗಿದೆ.

ಅಲ್ಲದೆ ಜವಾಹರ್ ಲಾಲ್ ನೆಹರೂ ಸೈಂಟಿಫಿಕ್ ಇನ್ಸಿ÷್ಟಟ್ಯೂಟ್ ನಲ್ಲು ಕೂಡ ನೀರು ತುಂಬಿಕೊAಡು ಅಲ್ಲಿಯೂ ಸಮಸ್ಯೆ ಉಂಟಾಗಿದೆ. ಈಗ ಅಲ್ಲಿಗೂ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು.

ಅಲ್ಲಿ ನಿಂತಿರುವ ನೀರನ್ನು ತೆಗೆಯುವ ವ್ಯವಸ್ಥೆಯನ್ನು ನಾನೇ ಮಾಡಿಸುತ್ತೇನೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಮಂಗಳವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿ ಮಳೆಯಿಂದ ಏನೆಲ್ಲ ಸಮಸ್ಯೆಯಾಗಿದೆ, ಎಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ, ಸಾವು ನೋವುಗಳು ಸಂಭವಿಸಿದೆಯೇ?, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಏನು ಕ್ರಮ ಕೈಗೊಂಡಿದ್ದಿರಾ ಎಂಬೆಲ್ಲಾ ಮಾಹಿತಿ ಪಡೆದುಕೊಂಡರು ಎಂದು ಸಿಎಂ ತಿಳಿಸಿದರು.

ನಾನು ಪ್ರಧಾನಿಯವರಿಗೆ ಮಳೆಯಿಂದಾಗಿರಿವ ಎಲ್ಲಾ ಸಮಸ್ಯೆಗಳ ಮಾಹಿತಿಯನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೇಂದ್ರದಿAದ ಸಹಾಯ ಬೇಕಾದರೆ ಸಿಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೂ ಕೂಡ ಕರೆ ಮಾಡಿ ವಿಚಾರಿಸಿದ್ದಾರೆ ಎಂದು ತಿಳಿಸಿದ್ದಾರೆ.