ಯಲಹಂಕ:ಕೊಲೆಗೆ ಸ್ಕೆಚ್ ಹಾಕಿರುವ ವಿಡಿಯೋ ಬಹಿರಂಗವಾಗಿದ್ದು,ಈ ಸಂಬಂಧ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ಗೋಪಾಲ್ ಕೃಷ್ಣ ಮತ್ತು ಆತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ.
ವಿಶ್ವನಾಥ್ ಅವರು ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಸ್ವರ್ಧಿಸಿ ಚುನಾಯಿತರಾಗಿದ್ದಾರೆ ಈಗ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ.
ಎಸ್. ಆರ್. ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿದ ವಿಡಿಯೋ ಒಂದು ಬಹಿರಂಗವಾಗಿದೆ.
ಎಡಿಟ್ ಮಾಡಲಾದ ವಿಡಿಯೋದಲ್ಲಿ ಚುನಾವಣೆಯಲ್ಲಿ ಪ್ರತಿಸ್ವರ್ಧಿಯಾಗಿದ್ದ ಕಾಂಗ್ರೆಸ್ ಮುಖಂಡ ಗೋಪಾಲ್ ಕೃಷ್ಣ ಕೊಲೆ ಮಾಡುವುದಾಗಿ ಹೇಳಿದಂತೆ ತೋರುತ್ತದೆ.
ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಸಂಚು ನಡೆಸಿದ ಗೋಪಾಲ್ ಕೃಷ್ಣ ಮತ್ತು ಕುಳ್ಳ ದೇವರಾಜ್ ವಿರುದ್ಧ ಇದೀಗ ವಿಶ್ವನಾಥ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರು ತಿಂಗಳ ನಂತರ ಎಡಿಟ್ ಮಾಡಲಾದ ವಿಡಿಯೋ ಬಯಲಿಗೆ ಬಂದಿದ್ದು ಸಿಸಿಬಿ ಪೊಲೀಸರು ಕುಳ್ಳದೇವರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ತಿಳಿಸಿದರು.
ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸಂಚು ನಡೆಸಿರುವ ಹಿನ್ನಲೆಯಲ್ಲಿ ಸಿಂಗನಾಯಕನಹಳ್ಳಿಯ ಅವರ ನಿವಾಸಕ್ಕೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ.

