ಬೆಂಗಳೂರು: ವಿಶ್ವದ 29ಕ್ಕೂ ಹೆಚ್ಚು ದೇಶಗಳಲ್ಲಿ ದಾಂಗುಡಿ ಇಟ್ಟಿರುವ ಓಮಿಕ್ರಾನ್ ಈಗ ಭಾರತಕ್ಕೂ ಲಗ್ಗೆ ಇಟ್ಟಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಈ ಮಹಾಮಾರಿ ಕಾಣಿಸಿಕೊಂಡಿರುವುದು ಆಘಾತಕಾರಿಯಾಗಿದೆ.
ಕೊರೊನಾ ಮಹಾಮಾರಿಯನ್ನೇ ಎದುರಿಸಿದ್ದೇವೆ. ಓಮಿಕ್ರಾನ್ ಯಾವ ಮಹಾ ಎಂದು ಮೈಮರೆತರೆ ಪ್ರಾಣಕ್ಕೆ ಕುತ್ತಾಗಿಬಿಡುತ್ತದೆ ಹೀಗಾಗಿ ಜನ ಎಚ್ಚರವಹಿಸುವುದು ಅತ್ಯಗತ್ಯ.
ಓಮಿಕ್ರಾನ್ ಕೊರೊನಾ ಸೋಂಕಿನ ರೀತಿ ವಾಸನೆ ಗ್ರಹಿಸದಿರುವುದು, ರುಚಿ ಕಳೆದುಕೊಳ್ಳುವುದು, ವಿಪರೀತ ಕೆಮ್ಮು, ಜ್ವರದಂತಹ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಹಾಗೆಂದು ಜನ ನಿರ್ಲಕ್ಷ್ಯ ತಳೆದರೆ ಹೃದಯಘಾತದಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಓಮಿಕ್ರಾನ್ ಕಾಣಿಸಿಕೊಂಡ ವ್ಯಕ್ತಿ ಎಲ್ಲರಂತೆ ಮಾಮೂಲಿನಂತೆ ಇರುತ್ತಾರೆ. ಅವರಲ್ಲಿ ಸಾಮಾನ್ಯ ಕೆಮ್ಮು ಮಾತ್ರ ಕಾಣಿಸಿಕೊಳ್ಳುತ್ತದೆ ಜೊತೆಗೆ ಹೃದಯ ಬಡಿತ ಜೋರಾಗುತ್ತದೆ. ಅದನ್ನು ಉದಾಸೀನ ಮಾಡಿದರೆ ಹೃದಯಘಾತವಾಗಲಿದೆ.
ಹೀಗಾಗಿ ಜನ ಮೈಮರೆಯದೆ ಸಾಮಾನ್ಯ ಕೆಮ್ಮು ಕಾಣಿಸಿಕೊಂಡರು ತಜ್ಞ ವೈದ್ಯರ ಸಲಹೆ ಸೂಚನೆ ಪಡೆದು ಪ್ರಾಣಾಪಾಯದಿಂದ ಪಾರಾಗಬೇಕೆಂದು ತಜ್ಞರು ಮನವಿ ಮಾಡಿದ್ದಾರೆ.
ಹೀಗಾಗಿ ಕೆಮ್ಮು ಕಾಣಿಸಿಕೊಂಡು ನಿಮ್ಮ ಹೃದಯಬಡಿತ ಜೋರಾದರೆ ಕೂಡಲೆ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ.
ನಾವು ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದೇವೆ ಎಂಬ ಊದಾಸೀನ ಬೇಡ, ಕೊರೊನಾ ಲಸಿಕೆ ಓಮಿಕ್ರಾನ್ ವಿರುದ್ದ ಹೋರಾಡಬಲ್ಲದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಅದರ ವರದಿ ಬರುವವರೆಗೆ ಮಹಾಮಾರಿ ಓಮಿಕ್ರಾನ್ ಬಗ್ಗೆ ಜನ ಮೈಮರೆಯಬಾರದು.
ಜನರು ಕೊರೊನ ನಿಯಮ ಉಲ್ಲಂಘಿಸದೆ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಜನಸಂದಣಿಯಿಂದ ಅಂತರ ಕಾಯ್ದುಕೊಳ್ಳಲು ಆಧ್ಯತೆ ನೀಡಬೇಕಿದೆ.

