ಎಂಇಎಸ್ ಹೇಡಿಗಳ ಸಂಘ -ಸಚಿವ ಈಶ್ವರಪ್ಪ ವಾಗ್ದಾಳಿ

ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣನವರ ಮಹತ್ವ ಇನ್ನೂ ಕೆಲವರಿಗೆ ಗೊತ್ತಿಲ್ಲ. ಅದೇ ರೀತಿ ಶಿವಾಜಿಯವರ ಹಿಂದೂ ಸ್ವರಾಜ್ ಬಗ್ಗೆಯೂ ಗೊತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿಗಳು ಕಂಡು ಬರುತ್ತಿವೆ  ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿರುವ ಹಲವಾರು ಜನರು ತಮ್ಮ ಮನೆಗಳಲ್ಲಿ ಅನ್ಯ ಭಾಷೆಗಳನ್ನು ಮಾತನಾಡಬಹುದು ಆದರೆ ಅವರು ಕರ್ನಾಟಕದಲ್ಲಿ ಇದ್ದಾರೆ ಎಂದ ಮೇಲೆ ಅವರೂ ಸಹ ಕನ್ನಡಿಗರೇ ಎಂದು ತಿಳಿಸಿದರು.

ಎಂಇಎಸ್ ಪುಂಡರು ಎಂಬ ಅಂಶವನ್ನು ಇಡೀ ಕರ್ನಾಟಕ ರಾಜ್ಯವೇ ಹೇಳುತ್ತಿದೆ. ಅವರು ನಡೆದುಕೊಂಡ ರೀತಿ ಕನ್ನಡಿಗರಿಗೆ ತುಂಬಾ ನೋವಾಗಿದೆ.  ಆ ಪುಂಡರ ಬಗ್ಗೆ ಏನೇನು ಕ್ರಮವನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡು ಸುಮಾರು 32 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಬಂಧಿನದಲ್ಲಿರುವ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ.  ಈ ಕೃತ್ಯಕ್ಕೆ ಕಾರಣವೇನು ಮತ್ತು ಇದರ ಹಿಂದೆ ಯಾವುದಾದರೂ ರಾಜಕೀಯ ಪಕ್ಷ ಇದೆಯೇ ಎಂಬ ಮಾಹಿತಿಯನ್ನು ಪಡೆದು ಅವರ ಮೇಲೆ ಕಠಿಣವಾದ ಕ್ರಮವನ್ನು ಜಾರಿ ಮಾಡಲಾಗುತ್ತದೆ‌ ಎಂದು ತಿಳಿಸಿದರು.

ಎಂಇಎಸ್ ಒಂದು ಹೇಡಿ ಸಂಘ ಎಂದು  ಈಶ್ವರಪ್ಪ ವಾಗ್ದಾಳಿ ನಡೆಸಿದರು.