ಸಿಎಂ ಮಂಡಿ ನೋವಿಗೆ ಮೈಸೂರು ವೈದ್ಯರಿಂದ ಚಿಕಿತ್ಸೆ

ಮೈಸೂರು: ಮಂಡಿ ನೋವಿನಿಂದ ಬಲಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಪ್ರಖ್ಯಾತ ರಾಜ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೆಕಲ್ ಎಂಬುವರು ಮುಖ್ಯಮಂತ್ರಿಗಳ ಮಂಡಿ ನೋವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೇರಿಕೆಗೆ ತೆರಳಲಿದ್ದಾರೆ, ಮತ ಸಂಕ್ರಾಂತಿ ನಂತರ ರಾಜ್ಯ ಮತ್ತೊಬ್ಬ ಮುಖ್ಯಮಂತ್ರಿಯನ್ನು  ಕಾಣಲಿದೆ ಎಂಬ ಸುದ್ದಿ ಹರದಾಡುತ್ತಿದೆ.

ಇಂತಹ ಸುದ್ದಿಗಳ ನಡುವೆ ಮುಖ್ಯಮಂತ್ರಿಗಳು,  ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಲೋಕೇಶ ಟೇಕಲ್ ಎಂಬುವರನ್ನು ಸಂಪರ್ಕಿಸಿ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಲೋಕೇಶ ಟೆಕಲ್  ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸ್ ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿರುವುದು ವಿಶೇಷ.

ಈ ವಿಷಯವನ್ನು ಲಕ್ಷಣ ಸವದಿ  ಮೆಲ್ಮನೆಯಲ್ಲೂ ಪ್ರಸ್ತಾಪಿಸಿದ್ದರು.

ವಿಧಾ ಪರಿಷತ್ ನಲ್ಲಿ ಆಯುಷ್ ವಿಧೇಯಕವನ್ನು ಮಂಡಿಸಲಾಗಿದೆ.

ನಾಟಿ ವೈದ್ಯ ಲೋಕೇಶ್ ಟೆಕಲ್ ಅವರು ಕ್ಯಾನ್ಸರ್, ಬ್ಲ್ಯಾಕ್ ಫಂಗಸ್, ಕೊರೋನಾ  ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ.

ಸಧ್ಯ ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೇಕೆ ಹಾಲು ಕುಡಿಯುವಂತೆ  ಸಲಹೆ ನೀಡಲಾಗಿದೆ.

ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಬಲವಾಗಲು ಸಹಾಯ ಮಾಡುತ್ತದೆ.

ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎನ್ನಲಾಗಿದೆ.

ಲಕ್ಷ್ಮಣ ಸವದಿ ಅವರು ಚರ್ಮ ರೋಗದಿಂದ ಗುಣಮುಖರಾಗಿದ್ದು, ಅವರೇ ಮುಂದಾಗಿ ಮುಖ್ಯಮಂತ್ರಿಗಳಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಬ್ಲಾಕ್ ಫಂಗಸನಿಂದಾಗಿ ಸಾವಿನ ಕದ ತಟ್ಟಿದ್ದ ಆನಂದ ಕುಲಾಲಿ ಎಂಬಾತನಿಗೂ,  ಲಕ್ಷಣ ಸವದಿಯವರೇ ಚಿಕಿತ್ಸೆ ಕೊಡಿಸಿದ್ದು,ಆತ ಎಂದಿನಂತೆ ಓಡಾಡುತ್ತಿದ್ದಾನೆ.