ಬೊಮ್ಮಾಯಿಗೆ ಪದೇ ಪದೇ ಕೈ ಕೊಡುತ್ತಿದೆ ವಿಮಾನ

ಬೆಂಗಳೂರು: ಅದೇನು ಗ್ರಾಚಾರಾನೊ ಏನೊ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪದೇ ಪದೇ ವಿಮಾನ ಕೈ ಕೊಡುತ್ತಲೇ ಇದೆ.

ಮತ್ತೆ ಇಂತಹುದೇ ಘಟನೆ ಮಂಗಳವಾರ ಕೂಡಾ ನಡೆದಿದೆ.

ಮಂಗಳವಾರ ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಸಿಎಂ ಹೋಗಬೇಕಾಗಿತ್ತು.

ಆದರೆ 8.45ಕ್ಕೆ ಹೊರಡಬೇಕಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು ಸುಮಾರು 2 ಗಂಟೆ ವಿಳಂಬವಾಯಿತು.

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಪಕ್ಷದ ಕಾರ್ಯಕಾರಿಣಿ ಸಭೆ ಹಾಗೂ ಕೆಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿರುವುದರಿಂದ ಸಿಎಂ ಹಾಗೂ ಸಂಪುಟದ ಕೆಲವು ಸಹೋದ್ಯೋಗಿಗಳು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಲು ಹೊರಟ್ಟಿದ್ದರು.

ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಟೇಕ್ ಆಫ್ ಆಗಲೇ ಇಲ್ಲ. ಎರಡು ಗಂಟೆಗಳ ನಂತರ ಬೊಮ್ಮಾಯಿ ಹುಬ್ಬಳ್ಳಿಗೆ ಪ್ರಯಾಣಿಸಿದರು.

ಈ ಹಿಂದೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಾಗಲೂ ಭಾರೀ ಮಂಜು ಆವರಿಸಿದ್ದರಿಂದ ಸುಮಾರು 1 ಗಂಟೆ ವಿಳಂಬವಾಗಿ ವಿಮಾನ ಲ್ಯಾಂಡ್ ಆಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೆ ವಿಮಾನ ಕೈ ಕೊಟ್ಟಿದೆ.